ಜರ್ಮನಿ ವಿರುದ್ಧ ಗೋಲಿನ ಸಂಭ್ರಮ: ಮೆಕ್ಸಿಕೋದಲ್ಲಿ ಭೂಕಂಪ !

Update: 2018-06-17 18:36 GMT

ಮೆಕ್ಸಿಕೊ ಸಿಟಿ, ಜೂ.17: ಫಿಫಾ ವಿಶ್ವಕಪ್‌ನಲ್ಲಿ ರವಿವಾರ ಮೆಕ್ಸಿಕೊ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ತಂಡವನ್ನು ಸೋಲಿಸಿದ ಬಳಿಕ ಮೆಕ್ಸಿಕೊ ಸಿಟಿಯಲ್ಲಿ ಭಾರೀ ಸಂಭ್ರಮಾಚರಣೆ ಕಂಡುಬಂತು.

35ನೇ ನಿಮಿಷದಲ್ಲಿ ಹಿರ್ವಿಂಗ್ ಲೊರೊನೊ ಗೋಲು ಬಾರಿಸಿದಾಗ ಜನರು ಕುಪ್ಪಳಿಸಿ ಕುಣಿದ ರಭಸಕ್ಕೆ ಸಣ್ಣ ಪ್ರಮಾಣದ ಕೃತಕ ಭೂಕಂಪವಾಯಿತು ಎಂದು ಮೆಕ್ಸಿಕೊ ಸರಕಾರ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News