ಬೆಂಗಳೂರು: ಬುದ್ಧನ ಪುತ್ಥಳಿ ಲೋಕಾರ್ಪಣೆ
Update: 2018-06-18 19:57 IST
ಬೆಂಗಳೂರು, ಜೂ, 18: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲಾ ಅವರು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕನ್ನಡ ಭವನಕ್ಕೆ ಆಗಮಿಸಿ ಉದ್ಯಾನವನದಲ್ಲಿ ಹೊಸದಾಗಿ ಸ್ಥಾಪಿಸಿರುವ ಗೌತಮ ಬುದ್ಧನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದರು.
ಸೋಮವಾರ ಪುತ್ಥಳಿ ಅನಾವರಣ ಮಾಡಿ, ಪಷ್ಪ ನಮನ ಸಲ್ಲಿಸಿದರು. ಅನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆಯ ಯೋಜನೆಗಳನ್ನು ಕುರಿತು ಸಭೆ ನಡೆಸಿ ಮಾಹಿತಿ ಪಡೆದರು.