ಕೆಎಂಡಿಸಿ ಮಾಜಿ ಎಂಡಿ ಸಲೀಮ್ ನಿಧನ

Update: 2018-06-18 16:59 GMT

ಬೆಂಗಳೂರು, ಜೂ.18: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ಮಾಜಿ ವ್ಯವಸ್ಥಾಪಕ ನಿರ್ದೇಶಕ, ಕೆಸಿಎಸ್ ಅಧಿಕಾರಿ ಮುಹಮ್ಮದ್ ಸಲೀಮ್(62) ಅನಾರೋಗ್ಯದಿಂದಾಗಿ ಸೋಮವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸಹಕಾರ ಇಲಾಖೆಯ ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ಆಗಿ ಸೇವೆ ಸಲ್ಲಿಸಿದ್ದ ಮುಹಮ್ಮದ್ ಸಲೀಮ್ ಆನಂತರ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದರು.

ಅನಾರೋಗ್ಯದ ಕಾರಣ ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಮೃತರು ಒಬ್ಬ ಮಗ ಹಾಗೂ ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ನಮಾಝ ಜನಾಝವನ್ನು ಮಂಗಳವಾರ ಮಧ್ಯಾಹ್ನ ಝುಹರ್ ನಮಾಝ್ ನಂತರ ನಾಯಂಡನಹಳ್ಳಿಯಲ್ಲಿರುವ ಮಸ್ಜಿದ್ ಅನ್ಸಾರ್‌ನಲ್ಲಿ ನೆರವೇರಿಸಲಾಗುವುದು. ಆನಂತರ, ಮೈಸೂರು ರಸ್ತೆಯಲ್ಲಿರುವ ಖಬರಸ್ಥಾನ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News