ಟಿಕೆಟ್ ಗಿಟ್ಟಿಸಲು 24 ಕೆ.ಜಿ. ತೂಕ ಏರಿಸಿಕೊಂಡ ಪೆರುವಿನ ಫುಟ್ಬಾಲ್ ಅಭಿಮಾನಿ ..!

Update: 2018-06-19 08:13 GMT

ಲಿಮಾ, ಜೂ.19: ಪೆರುವಿನಲ್ಲಿ ಫುಟ್ಬಾಲ್  ವಿಶ್ವಕಪ್ ಜ್ವರ ಏರಿದೆ.  ಅಲ್ಲಿನ ಫುಟ್ಬಾಲ್ ಅಭಿಮಾನಿಗಳು ಫುಟ್ಬಾಲ್ ಟಿಕೆಟ್ ಪಡೆಯಲು ಇನ್ನಿಲ್ಲದ  ಕಸರತ್ತು ನಡೆಸುತ್ತಿದ್ದಾರೆ. ಒಬ್ಬ   ಫುಟ್ಬಾಲ್ ಗಾಗಿ ನೌಕರಿ ತೊರೆದಿದ್ದಾನೆ. ಇನ್ನೊಬ್ಬ ಕಾರು ಮಾರಿದ್ದಾನೆ . ಮತ್ತೊಬ್ಬ 25 ಕೆ.ಜಿ ತೂಕ ಏರಿಸಿಕೊಂಡಿದ್ದಾನೆ.

 ರೊಡ್ರಿಗೋ ವೆರೆಸ್ಗುಯಿ ಎಂಬಾತನಿಗೆ  ಇನ್ನೊಮ್ಮೆ ಪೆರು ವಿಶ್ವಕಪ್ ಗೆ ಅವಕಾಶ ಪಡೆಯುವ ಧೈರ್ಯ  ಇಲ್ಲ. ಈ ಕಾರಣದಿಂದಾಗಿ ಆತ ತನ್ನ ಪತ್ನಿ , ನಾಲ್ಕರ ಹರೆಯದ ಮಗ, ಹೆತ್ತವರ ಜೊತೆ ಪೆರು ತಂಡದ ಫುಟ್ಬಾಲ್ ಪಂದ್ಯಗಳ ವೀಕ್ಷಣೆಗೆ ರಶ್ಯಕ್ಕೆ ತೆರಳಿದ್ದಾನೆ. 

ಪೆರು ದೇಶದ ಫುಟ್ಬಾಲ್ ತಂಡ 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ನ ಗ್ರೂಪ್ ಹಂತದ ಸ್ಪರ್ಧೆಗೆ ಅರ್ಹತೆ  ಪಡೆದಿತ್ತು.

 ವಿಶ್ವಕಪ್ ನಲ್ಲಿ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಪೆರು ತಂಡ ರಶ್ಯದಲ್ಲಿ ಆಡುವುದನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು ಪೆರುವಿನ ಫುಟ್ಬಾಲ್ ಅಭಿಮಾನಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.

ಈ ಪೈಕಿ ಒಬ್ಬ ವ್ಯಕ್ತಿ ಸುಲಭವಾಗಿ ಟಿಕೆಟ್ ಪಡೆಯುವ ಉದ್ದೇಶಕ್ಕಾಗಿ 3 ತಿಂಗಳಲ್ಲಿ 24 ಕೆ.ಜಿ. ಭಾರ ಏರಿಸಿಕೊಂಡಿದ್ದಾನೆ.  ಗಿಲ್ಲೆರ್ಮೊ  ಎಸ್ಪಿನೊಝಾ ಎಂಬಾತನಿಗೆ ಪೆರು ಆಡುವ ಪಂದ್ಯದ   ಟಿಕೆಟ್ ದೊರೆಯುವುದಿಲ್ಲ ಎಂಬ ಆತಂಕ ಇತ್ತು. ಈ ಕಾರಣಕ್ಕಾಗಿ ದಪ್ಪ ದೇಹದ ವ್ಯಕ್ತಿಗಳಿಗೆ ಮೀಸಲಾಗಿರುವ ಸೀಟ್  ಪಡೆಯವ ಉದ್ದೇಶಕ್ಕಾಗಿ ಕಳೆದ ಮೂರು ತಿಂಗಳಿನಿಂದ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಪೆರು ತಂಡ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ 0-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಜೂ.21ರಂದು ಫ್ರಾನ್ಸ್ ತಂಡವನ್ನು ಎದುರಿಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News