ಬೆಂಗಳೂರು: ಜೂ.21ಕ್ಕೆ ಯೋಗ ದಿನಾಚರಣೆ

Update: 2018-06-19 16:00 GMT

ಬೆಂಗಳೂರು, ಜೂ.19: ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಜೂ.21 ರಂದು ಬೆಳಗ್ಗೆ 7 ಗಂಟೆಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಶಿವಕುಮಾರ್, ಆಯುಷ್ ಇಲಾಖೆ ಸಹಯೋಗದಲ್ಲಿ ನಗರದ ಎಲ್ಲ ಬಡಾವಣೆಗಳಲ್ಲಿ ಯೋಗಾಭ್ಯಾಸ, ಬೈಕ್ ರ್ಯಾಲಿ, ಯೋಗ ವಾಕಥಾನ್ ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಯೋಗದಿಂದ ಒತ್ತಡ ಜೀವನದಿಂದ ದೂರ ಸರಿಯಲು ಹೆಚ್ಚು ಉಪಯೋಗ. ಶಾಂತಿ, ಆನಂದ ಮತ್ತು ಸಂಪೂರ್ಣ ಜೀವನದ ಬಗ್ಗೆ ತಿಳಿವಳಿಕೆ ನೀಡುವುದೇ ಕಾರ್ಯಕ್ರಮದ ಉದ್ದೇಶವಾಗಿದ್ದು, ಸಮಿತಿಯಿಂದ ರಾಜ್ಯದಾದ್ಯಂತ ಯೋಗಾಸಕ್ತರಿಗೆ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಆಸಕ್ತ ಅಭ್ಯರ್ಥಿಗಳು ಅರ್ಜಿ ಪಡೆಯಲು ಮತ್ತು ಅರ್ಜಿಯ ಜೊತೆಗೆ ಲಗತ್ತಿಸಬೇಕಾದ ದಾಖಲಾತಿಗಳ ಬಗ್ಗೆ, ತರಬೇತಿ ಸಂಸ್ಥೆಗಳಲ್ಲಿನ ಸೀಟುಗಳ ಮೀಸಲಾತಿ ಬಗ್ಗೆ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ದೂ. 080-22212128, ಧಾರವಾಡ ದೂ.0836-2442465, ಮಂಗಳೂರು- 08242425873, ಕಲಬುರ್ಗಿ 08472-221543ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News