ಸುಬ್ರಹ್ಮಣ್ಯ ಭಟ್
Update: 2018-06-19 22:43 IST
ಉಡುಪಿ, ಜೂ.19: ಸುಳ್ಯ ತಾಲೂಕಿನ ಕೊಳ್ತಿಗೆ ಗ್ರಾಮದ ಪಾಪುತಡ್ಕ ದಿ.ಮಹಾಲಿಂಗ ಭಟ್ ಅವರ ಪುತ್ರ ಪಿ.ಸುಬ್ರಹ್ಮಣ್ಯ ಭಟ್ (58) ಕಬಕ ಬೈಪದವಿನಲ್ಲಿ ಹೃದಯಘಾತದಿಂದ ನಿಧನರಾದರು.
ಕೋಟೆ ಮುಂಡುಗಾರು ಸೊಸೈಟಿ, ಸುಳ್ಯದ ಮುಳಿಯ ಜ್ಯುವೆಲ್ಲರ್ಸ್, ಮೈಸೂರಿನ ಭೀಮ ಜ್ಯುವೆಲ್ಲರ್ಸ್, ಪುತ್ತೂರಿನ ಮುಳಿಯ ಜ್ಯುವೆಲ್ಲರ್ಸ್, ಪೋಳ್ಯ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಗೋಲೆಕ್ಸ್ ಪಶು ಆಹಾರ ಪೂರೈಕೆ ಸಂಸ್ಥೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಇವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.