ಅಕ್ಷರ ಪ್ರೀತಿ ಕಳೆದು ಹೋಗುತ್ತಿದೆ: ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್

Update: 2018-06-20 13:42 GMT

ಬೆಂಗಳೂರು, ಜೂ.20: ಅಕ್ಷರಪ್ರೀತಿ ಕಳೆದು ಹೋಗುತ್ತಿರುವ ಕಾಲದಲ್ಲಿ ಹೊಸ ಕೃತಿಗಳು ಮಾರುಕಟ್ಟೆಗೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಳವಳ್ಳಿ ಸೂರಿ ರಚನೆಯ ಕ್ರಿಮಿನಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಮಾರ್ಟ್‌ಫೋನ್‌ಗಳ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಬಹುತೇಕರಲ್ಲಿ ಪುಸ್ತಕಪ್ರೀತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಬರಹಗಾರರು ಹೊಸ ಬಗೆಯಲ್ಲಿ ಕೃತಿಗಳನ್ನು ರಚಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

9ನೇ ತರಗತಿ ಓದಿರುವ ಮಳವಳ್ಳಿ ಸೂರಿ ಅವರು ತಮ್ಮ ಸ್ವಂತ ಬದುಕನ್ನಾಧರಿಸಿ ಕೃತಿ ರಚಿಸಿದ್ದಾರೆ. ಅವರು ಪೊಲೀಸ್ ಠಾಣೆಯಲ್ಲಿ ಅನುಭವಿಸಿದ ಸಂಕಷ್ಟ, ಮಾನವ ಹಕ್ಕುಗಳ ಉಲ್ಲಂಘನೆ ಹೀಗೆ ಹಲವು ಘಟನೆಗಳು ಓದುಗರನ್ನು ಸೆರೆಹಿಡಿಯಲಿದೆ ಎಂದು ತಿಳಿಸಿದರು.

ಕ್ರಿಮಿನಲ್ ಕೃತಿಯನ್ನಾಧರಿಸಿ ಸಿನಿಮಾ ಕೂಡ ಮಾಡಬಹುದು. ಈ ಕೃತಿ ಸಮಾಜದಲ್ಲಿ ಸಣ್ಣ ಬದಲಾವಣೆಯನ್ನು ತರಬಹುದು ಎಂದು ನಾನು ನಂಬಿರುವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News