ಕಾರಿಗೆ ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಢಿಕ್ಕಿ: 12 ಮಂದಿ ಮೃತ್ಯು

Update: 2018-06-21 08:02 GMT

ಮಧ್ಯಪ್ರದೇಶ, ಜೂ.21: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಒಂದು ಬೊಲೆರೋ ಎಸ್ ಯುವಿ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 12 ಮಂದಿ ಮೃತಪಟ್ಟು, 8 ಜನರು ಗಾಯಗೊಂಡಿರುವ ಘಟನೆ ಇಲ್ಲಿನ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

ಅಂಬಾ ಪಟ್ಟಣಕ್ಕೆ ಟ್ರ್ಯಾಕ್ಟರ್ ತೆರಳುತ್ತಿದ್ದ ವೇಳೆ ಗಂಜ್ ರಾಮ್ ಪುರ್ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಮೃತರಲ್ಲಿ ಹೆಚ್ಚಿನವರು ಗ್ವಾಲಿಯರ್ ನ ಒಂದೇ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕನೂ ಗಾಯಗೊಂಡಿದ್ದಾನೆ.

ಅಪಘಾತದ ರಭಸಕ್ಕೆ ಬೊಲೊರೋ ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಮೊರೆನಾದ ಎಸ್ಪಿ ಅಮಿತ್ ಸಾಂಘ್ವಿ ಹೇಳಿದ್ದಾರೆ. "ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ" ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News