ಬೆಂಗಳೂರು: ಜೂ.25ರಿಂದ ಚಿತ್ರಕಲಾ ಪ್ರದರ್ಶನ
Update: 2018-06-21 19:19 IST
ಬೆಂಗಳೂರು, ಜೂ.21: ಕರ್ನಾಟಕ ಲಲಿತಾ ಕಲಾ ಅಕಾಡೆಮಿ ವತಿಯಿಂದ ಜೂ.25ರಿಂದ 27ರವರೆಗೆ ಕನ್ನಡ ಭವನದ ಆರ್ಟ್ ಗ್ಯಾಲರಿಯಲ್ಲಿ 22ನೆ ತಿಂಗಳ ಚಿತ್ರ ಪ್ರದರ್ಶನ ಕೈಗೊಳ್ಳಲಾಗಿದೆ.
ನಾಡಿನ ಯುವ ಕಲಾವಿದರಾದ ಶುಭಾ ಸಿ.ರಘು, ಹರೀಶ್ ನಾಯ್ಕ, ಸತೀಶ್ ಆಚಾರ್ ಹಾಗೂ ನಿಂಗಪ್ಪ ಎನ್.ಪ್ರಧಾನಿ ರಚಿಸಿರುವ ಕಲಾಕೃತಿಗಳು ಪ್ರದರ್ಶನಕ್ಕಿರಲಿವೆ. ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷ ವಿ.ಆರ್.ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ ಎಂದು ಅಕಾಡೆಮಿಯ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.