ಬಿಸಿಐಸಿಯ ನೂತನ ಅಧ್ಯಕ್ಷರಾಗಿ ಆಳ್ವ ಪದಗ್ರಹಣ

Update: 2018-06-21 16:22 GMT

ಬೆಂಗಳೂರು, ಜೂ.21: ಅದಾನಿ ಗ್ರೂಪ್ ಕರ್ನಾಟಕದ ಮುಖ್ಯಸ್ಥ ಕಿಶೋರ್ ಆಳ್ವ ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಚೇಂಬರ್(ಬಿಸಿಐಸಿ)ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ನಗರದ ಲೇ ಮೆರಿಡಿಯನ್‌ನಲ್ಲಿ ಜೂ. 22ರಂದು ನಡೆಯುವ ಬಿಸಿಐಸಿನ 41ನೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪದಗ್ರಹಣ ಮಾಡಲಿದ್ದಾರೆ. ಈ ಸಭೆಗೆ ಮುಖ್ಯ ಅತಿಥಿಯಾಗಿ ಮಾಜಿ ಪ್ರಧಾನಿ ದೇವೇಗೌಡ ಬರಲಿದ್ದಾರೆ. ಈ ಸಂದರ್ಭದಲ್ಲಿ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಸ್ಥಾಪಕ ಡಾ. ಆನಂದ್ ದೇಶಪಾಂಡೆ ಹಾಗೂ ಟಾಟಾ ಕಂಪನಿಗಳ ಮಂಡಳಿಗಳ ನಿದೇರ್ಶಕ ಹರೀಶ್ ಭಟ್ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಬಿಸಿಐಸಿನ ಪ್ರಧಾನ ಕಾರ್ಯದರ್ಶಿ ರಾಜು ಭಟ್ನಾಗರ್ ತಿಳಿಸಿದರು.

ನಿಗದಿತ ಗುರಿಗಳನ್ನು ತಲುಪುವಲ್ಲಿ ನಾನು ಸ್ಪಷ್ಟ ಉದ್ದೇಶಗಳನ್ನು ಹೊಂದಿ ಮುನ್ನಡೆಯುತ್ತೇನೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆ ನಿಕಟ ಸಂಪರ್ಕಗಳನ್ನಿಟ್ಟುಕೊಂಡು ಕೆಲಸ ಮಾಡಲು ಮುಂದಾಗುತ್ತೇನೆ. ಆ ಕೆಲಸಗಳಲ್ಲಿ ಬಿಸಿಐಸಿನ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಡಲಿದ್ದೇನೆ.
-ಕಿಶೋರ್ ಆಳ್ವ, ನೂತನ ಅಧ್ಯಕ್ಷ, ಬಿಸಿಐಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News