ಪಿ.ಮುಹಮ್ಮದ್
Update: 2018-06-21 23:07 IST
ಪಡುಬಿದ್ರಿ, ಜೂ. 21: ಪಡುಬಿದ್ರಿ ನಿವಾಸಿ ಪಿ.ಮುಹಮ್ಮದ್ (73) ಅಸೌಖ್ಯದಿಂದ ಬುಧವಾರ ರಾತ್ರಿ ನಿಧನಹೊಂದಿದ್ದಾರೆ.
ಇವರು ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಕರಣಿಕರ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ 33 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರ. ಇದಕ್ಕೂ ಮೊದಲು ಪಡುಬಿದ್ರಿಯಲ್ಲಿ ಗೋಲಿ ಸೋಡ ವ್ಯವಹಾರವನ್ನು ನಡೆಸಿ ಸೈಕಲ್ ಮೂಲಕ ಸೋಡಾ ಮಾರಾಟವನ್ನು ನಡೆಸುತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.