ವೃತ್ತಿಪರ ಕೋರ್ಸ್‌ಗಳ ಶುಲ್ಕ ಹೆಚ್ಚಳಕ್ಕೆ ನಕಾರ

Update: 2018-06-22 16:15 GMT

ಬೆಂಗಳೂರು, ಜೂ.22: ವೃತ್ತಿಪರ ಕೋರ್ಸುಗಳಾದ ಎಂಜನೀಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಹಲವು ಕೋರ್ಸ್‌ಗಳ ಶುಲ್ಕವನ್ನು ನಾಲ್ಕು ಪಟ್ಟು ಶುಲ್ಕ ಏರಿಕೆ ಮಾಡಲು ಸಮಿತಿ ನಿರಾಕರಿಸಿದೆ.

ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಮನವಿಯನ್ನು ತಿರಸ್ಕರಿಸಿದ ಶುಲ್ಕ ಏರಿಕೆ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್, ಪ್ರತಿಶತ ಎಂಟರಷ್ಟು ಮಾತ್ರ ಶುಲ್ಕ ಹೆಚ್ಚಿಸಬೇಕು, ಅದಕ್ಕಿಂತ ಅಧಿಕ ಶುಲ್ಕ ಹೆಚ್ಚಳ ಮಾಡಲು ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಕಾಲೇಜುಗಳು ಸುಪ್ರೀಂಕೋರ್ಟ್ ಆದೇಶದಂತೆ ಶುಲ್ಕ ನಿಗದಿಪಡಿಸಬೇಕಾಗುತ್ತದೆ. ಹೆಚ್ಚಿನ ಶುಲ್ಕದ ಅಗತ್ಯತೆ ಇದ್ದರೆ ಕೋರ್ಟ್‌ಗೆ ಹೋಗಲಿ. ಸಮಿತಿ ಶುಲ್ಕ ನಿಗದಿಪಡಿಸಿದ ನಂತರ ಅದನ್ನು ಮತ್ತಷ್ಟು ಹೆಚ್ಚಿಸಲು ಸರಕಾರಕ್ಕೆ ಅಧಿಕಾರ ಇರುವುದಿಲ್ಲ. ಬೇಕಾದರೆ ಶುಲ್ಕವನ್ನು ಕಡಿಮೆ ಮಾಡಬಹುದು ಎಂದು ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.

ಸರಕಾರದ ಜತೆ ಒಪ್ಪಂದ ಮಾಡಿಕೊಂಡು ಕಾಲೇಜುಗಳು ಒಂದೊಮ್ಮೆ ಶೇ.8ಕ್ಕಿಂತ ಶುಲ್ಕ ಹೆಚ್ಚಳ ಮಾಡಿದ ಕುರಿತು ವಿದ್ಯಾರ್ಥಿಗಳು ದೂರು ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕಾಲೇಜುಗಳ ಬೇಡಿಕೆ: ವೈದ್ಯಕೀಯ ಕೋರ್ಸ್ ಶುಲ್ಕವನ್ನು 9.8 ಲಕ್ಷ ರೂ.ಗಳಿಂದ 44.4 ಲಕ್ಷಕ್ಕೆ ಹೆಚ್ಚಿಸಬೇಕು. ದಂತ ವೈದ್ಯಕೀಯ ಶುಲ್ಕ 3 ಲಕ್ಷ ರೂ.ಗಳಿಂದ. 19.3 ಲಕ್ಷಕ್ಕೆ, ಎಂಜನಿಯರಿಂಗ್ ಶುಲ್ಕವನ್ನು 75 ಸಾವಿರದಿಂದ 4.45 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಬೇಕು ಎಂದು ಕಾಲೇಜು ಆಡಳಿತ ಮಂಡಳಿ ಬೇಡಿಕೆ ಸಲ್ಲಿಸಿದ್ದವು. ಆದರೆ, ಅದನ್ನು ಶುಲ್ಕ ಏರಿಕೆ ಸಮಿತಿ ತಿರಸ್ಕಾರ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News