ಬೆಂಗಳೂರು: ಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ಲಾಲ್‌ಬಾಗ್

Update: 2018-06-23 16:13 GMT

ಬೆಂಗಳೂರು, ಜೂ.23: ಲಾಲ್ ಬಾಗ್‌ನಲ್ಲಿ ಪ್ರತಿ ವರ್ಷ ಆ.15 ಸ್ವಾತಂತ್ರ ದಿನಾಚರಣೆ ಅಂಗವಾಗಿ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ. ಅದರ ಭಾಗವಾಗಿ ಇದೀಗ ಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್ ಸಜ್ಜಾಗುತ್ತಿದೆ.

ಸುಮಾರು ಮೂರುವರೆ ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಗುಲಾಬಿ ಗಿಡಗಳನ್ನು ಏಕ ಕಾಲಕ್ಕೆ ಕತ್ತರಿಸಲಾಯಿತು. ಎಲ್ಲ ಗಿಡಗಳನ್ನು ಒಂದೇ ದಿನ ಕತ್ತರಿಸಿ ಅದಕ್ಕೆ ತಕ್ಕ ಆರೈಕೆ ಮಾಡಿದರೆ ಎಲ್ಲವೂ ಒಂದೇ ಅಳತೆಯಲ್ಲಿ ಬೆಳೆದು, ಏಕಕಾಲಕ್ಕೆ ಹೂವು ಬಿಡಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಜಗದೀಶ್ ಮಾಹಿತಿ ನೀಡಿದ್ದಾರೆ.

ಲಾಲ್‌ಬಾಗ್‌ನ ಗುಲಾಬಿ ವನದಲ್ಲಿ ಹಳದಿ, ಕೆಂಪು, ನೇರಳೆ, ಬಿಳಿ ಹೀಗೆ ವಿವಿಧ ಬಣ್ಣದ ವಿವಿಧ ಆಕಾರದ ಸುಮಾರು 1500 ಕ್ಕೂ ಅಧಿಕ ಗುಲಾಬಿ ಗಿಡಗಳಿವೆ. ಇದೇ ಮೊದಲ ಬಾರಿಗೆ ಗಾಂಧೀಜಿಯವರು ಮೊದಲ ಬಾರಿಗೆ ಸತ್ಯಾಗ್ರಹ ಆರಂಭಿಸಿದ ಮದ್ದೂರಿನ ಸತ್ಯಾಗ್ರಹ ಕಟ್ಟಡದ ಮಾದರಿಯನ್ನು ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಮಳೆ ಬರುವ ಸಾಧ್ಯತೆ ಇದ್ದರೆ ಹೆಚ್ಚು ಹಣದಲ್ಲಿ ಬೇರೆ ಯಾವುದಾದರೂ ಮಾದರಿಯನ್ನು ನಿರ್ಮಿಸಲಾಗುವುದು ಎಂದು ಮೈಸೂರು ಉದ್ಯಾನ ಕಲಾಸಂಘ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News