ಹೈಕ ಅಭಿವೃದ್ಧಿಗಾಗಿ ಆಗ್ರಹಿಸಿ ವಾಟಾಳ್ ನಾಗರಾಜ್ ವಿನೂತನ ಚಳವಳಿ

Update: 2018-06-23 16:15 GMT

ಬೆಂಗಳೂರು, ಜೂ.23: ಹೈದರಾಬಾದ್ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಚಾಪೆ, ದಿಂಬು, ಹಾಸಿಗೆ, ತಟ್ಟೆ, ಚೊಂಬು ತಂದು ರಸ್ತೆಯಲ್ಲಿಯೇ ಮಲಗಿ ಪ್ರತಿಭಟನೆ ನಡೆಸಿ, ಹೈದಾರಬಾದ್ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, 371ನೇ ಜೆ ಕಲಂ ಪ್ರಕಾರ ಹೈದರಾಬಾದ್ ಕರ್ನಾಟಕದವರಿಗೆ ಸಲ್ಲಬೇಕಾದಂತಹ ಅನುಕೂಲಗಳನ್ನ ಮಾಡಲೇಬೇಕು. ಹೈದರಾಬಾದ್ ಕರ್ನಾಟಕ ಸಂಪೂರ್ಣ ಹಿಂದುಳಿದಿದ್ದು, ಎಲ್ಲ ಸರಕಾರಗಳು ಕಡೆಗಣಿಸುತ್ತಾ ಬಂದಿದೆ. ಸರಿಯಾದ ರಸ್ತೆಗಳಿಲ್ಲ, ಕಟ್ಟಡಗಳಿಲ್ಲ. ಆ ಭಾಗ ಇಂದು ಸಂಪೂರ್ಣ ಕಗ್ಗತ್ತಲಲ್ಲಿ ಮುಳುಗಿದೆ ಎಂದು ಹೇಳಿದರು.

ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳೂ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಯೋಜನೆ ಘೋಷಿಸಬೇಕು ಹಾಗೂ ನಿರುದ್ಯೋಗಿ ಪದವೀಧರಿಗೆ 5 ಸಾವಿರ ರೂ. ಮಾಸಿಕ ವೇತನ ನೀಡಬೇಕು ಎಂದು ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News