ಬೆಂಗಳೂರು: ಸೀರೆಯಲ್ಲಿಯೇ ಮಹಿಳೆಯರ ಮ್ಯಾರಥಾನ್

Update: 2018-06-24 16:54 GMT

ಬೆಂಗಳೂರು, ಜೂ.24: ನಗರದ ಮಲ್ಲೇಶ್ವರಂನ 18 ನೆ ಕ್ರಾಸ್‌ನಲ್ಲಿ ‘ಡ್ರೆಸ್ ಕೋಡ್ ಚಿಂತೆ ಬಿಡಿ ಸೀರೆಯಲ್ಲೇ ಫಿಟ್ನೆಸ್ ಸಾಭೀತು ಮಾಡಿ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿತ್ತು.

ಸೀರೆಯುಟ್ಟು ನಡೆಯೋದೆ ಕಷ್ಟ. ಅಂತಹದರಲ್ಲಿ ಸೀರೆಯುಟ್ಟುಕೊಂಡು ನಗರದ ಮಲ್ಲೇಶ್ವರಂನ 18 ನೆ ಕ್ರಾಸ್‌ನಲ್ಲಿರುವ ಸುಮನ್ ನಗರ ಸರ್ಕಲ್‌ನಿಂದ ಸುತ್ತಮುತ್ತದ ಗಲ್ಲಿಗಳಲ್ಲಿ ಓಡುವ ಮೂಲಕ ನೂರಾರು ಮಹಿಳೆಯರು ಸೀರೆಯಲ್ಲಿಯೂ ಮ್ಯಾರಥಾನ್ ಸಾಧ್ಯ ಎಂದು ತೋರಿಸಿಕೊಟ್ಟರು.
ರವಿವಾರದಂದು ಮನೆಗಳಲ್ಲಿ ತಡವಾಗಿ ಎದ್ದು, ನೆಮ್ಮದಿಯಾಗಿ ನಿಟ್ಟುಸಿರು ಬಿಡುವುದು ಸಾಮಾನ್ಯ ಸಂಗತಿ. ಆದರೆ, ಇಂದು ಬಹಳಷ್ಟು ಮಹಿಳೆಯರು ಭಿನ್ನವಾಗಿ ಮ್ಯಾರಥಾನ್‌ನಲ್ಲಿ ಕಾಣಿಸಿಕೊಂಡಿದ್ದು, ಹಲವರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಮ್ಯಾರಾಥಾನ್‌ನಲ್ಲಿ ನೂರಾರು ಗೃಹಿಣಿಯರು ಭಾಗಿಯಾಗಿದ್ದರು. ಅಲ್ಲದೆ, ಅಮ್ಮಂದಿರ ಜೊತೆ ಪುಟ್ಟ ಬಾಲಕಿಯರು ಪಾಲ್ಗೊಂಡಿದ್ದುದು ಮತ್ತಷ್ಟು ಮೆರಗು ನೀಡಿತ್ತು. ಒಟ್ಟಾರೆಯಾಗಿ ಸೀರೆಯಲ್ಲಿಯೂ ಫಿಟ್ನೆಸ್ ಆಗಬಹುದು ಎಂಬುದನ್ನು ಮಹಿಳೆಯರು ತೋರಿಸಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News