ಸಾಮಾಜಿಕ ಜಾಲತಾಣದಲ್ಲಿ ಯಾರನ್ನೂ ಅವಮಾನಿಸಬೇಡಿ: ನೇಮರ್ ತಂದೆ ಕಿವಿಮಾತು

Update: 2018-06-25 08:24 GMT

ಮಾಸ್ಕೊ, ಜೂ.25: ಈಗ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ನೇಮರ್ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕೆ ಮಾಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಈ ರೀತಿ ಮಾಡದಂತೆ ಬ್ರೆಝಿಲ್‌ನ ಸ್ಟಾರ್ ಆಟಗಾರ ನೇಮರ್ ಬೆಂಬಲಿಗರಿಗೆ ನೇಮರ್ ತಂದೆ ಕಿವಿಮಾತು ಹೇಳಿದ್ದಾರೆ.

‘‘ಸ್ನೇಹಿತರೇ, ಸಾಮಾಜಿಕ ಮಾಧ್ಯಮದಲ್ಲಿ ಶಾಂತರಾಗಿರಿ ಯಾರನ್ನೂ ಅವಮಾನಿಸಬೇಡಿ. ನೀವು ನೇಮರ್‌ಗೆ ಬೆಂಬಲ ವ್ಯಕ್ತಪಡಿಸಲು ಬಯಸಿದರೆ ಅದನ್ನು ಧನಾತ್ಮಕವಾಗಿ ಮಾಡಿ. ನಂಬಿಕೆ ಹಾಗೂ ಪ್ರಾರ್ಥನೆಯಂತಹ ಸರಿಯಾದ ಅಸ್ತ್ರವನ್ನು ಬಳಸಿ’’ ಎಂದು ಸೀನಿಯರ್ ನೇಮರ್ ಗ್ಲೋಬಲ್‌ಸ್ಪೋರ್ಟ್ ಡಾಟ್‌ಕಾಮ್ ಪ್ರಕಟಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.

 ನೇಮರ್ ವಿಶ್ವದ ದುಬಾರಿ ಆಟಗಾರ ಮಾತ್ರವಲ್ಲ,ಬ್ರೆಝಿಲ್‌ನ ಪ್ರತಿಭಾವಂತ ತಂಡದ ಜನಪ್ರಿಯ ಆಟಗಾರ. ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘಸಮಯದ ಬಳಿಕ ತಂಡಕ್ಕೆ ವಾಪಸಾಗಿರುವ ನೇಮರ್ ಟೀಮ್ ಆಟಗಾರನಾಗಿರದೇ ಮೈದಾನದಲ್ಲಿ ನಾಟಕೀಯವಾಗಿ ಡೈವಿಂಗ್ ಮಾಡುವ ಆರೋಪ ಎದುರಿಸುತ್ತಿದ್ದಾರೆ.

26ರ ಹರೆಯದ ನೇಮರ್ ಶುಕ್ರವಾರ ಕೋಸ್ಟರಿಕಾ ವಿರುದ್ಧ 2-0 ಅಂತರದಿಂದ ಗೆದ್ದ ಪಂದ್ಯದಲ್ಲಿ ಗೋಲು ಬಾರಿಸಿದ್ದರು. ಆ ಗೋಲು ಬಾರಿಸಿದಾಗ ಅವರ ಕಣ್ಣಲ್ಲಿ ಆನಂದಭಾಷ್ಪ ಸುರಿದಿತ್ತು.

ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ನೇಮರ್ ಪ್ರದರ್ಶನವನ್ನು ಕೆಲವರು ಟೀಕಿಸಿದ್ದು ಅವರನ್ನು ತಂಡದಿಂದ ಕೈಬಿಡಬೇಕೆಂದು ಆಗ್ರಹಿಸುತ್ತಿದ್ದಾರೆ. ನೇಮರ್ ತಂಡದ ಉಳಿದ ಸದಸ್ಯರಿಗೆ ಅಡ್ಡಿಯಾಗುತ್ತಿದ್ದಾರೆ. ಬ್ರೆಝಿಲ್ ಪಂದ್ಯದಲ್ಲಿ ವೇಗ ಕಡಿಮೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News