ಪಂದ್ಯಕ್ಕೂ ಮುನ್ನ ಕುರ್ ಆನ್ ಪಠಿಸಿದ ಟ್ಯುನಿಶಿಯ ಆಟಗಾರರ ವಿರುದ್ಧ ಟೀಕೆ: ಈ ಬಗ್ಗೆ ಕೋಚ್ ಪ್ರತಿಕ್ರಿಯೆ ಏನು ಗೊತ್ತಾ?

Update: 2018-06-25 09:29 GMT

ಟುನಿಸ್, ಜೂ.25: ರಶ್ಯಾದಲ್ಲಿ ನಡೆಯುತ್ತಿರುವ ಫುಟ್ ಬಾಲ್ ವಿಶ್ವಕಪ್ ನ ಪಂದ್ಯವೊಂದಕ್ಕೆ ಮೊದಲು ಕುರ್ ಆನ್ ಅಧ್ಯಾಯವೊಂದನ್ನು ಪಠಿಸಿದ್ದಕ್ಕಾಗಿ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ಯುನಿಶಿಯ ಫುಟ್ಬಾಲ್ ತಂಡದ ಹಿರಿಯ ಕೋಚ್ ನಬೀಲ್ ಮಾಲೂಲ್ ಪ್ರತಿಕ್ರಿಯಿಸಿದ್ದಾರೆ.

ಟ್ಯುನಿಶಿಯದ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, "ಟೀಕೆಗಳ ಕುರಿತಾಗಿ ನಾನು ಒಂದನ್ನು ಹೇಳಲು ಇಚ್ಛಿಸುತ್ತೇನೆ. ಫಾತಿಹಾವನ್ನು ಓದಿದ್ದಕ್ಕಾಗಿ ನನ್ನನ್ನು ಯಾರೆಲ್ಲಾ ಟೀಕಿಸಿದ್ದಾರೆಯೋ ಅವರೆಲ್ಲಾ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ" ಎಂದಿದ್ದಾರೆ.

"ನಾವು ಕುರ್ ಆನ್ ಹಾಗು ಫಾತಿಹಾದೊಂದಿಗೆ ಬೆಳೆದವರು. ನಮಗೆ ಶಾಲೆಯಲ್ಲಿ ಪರೀಕ್ಷೆ ಇದ್ದಾಗಲೂ ಸಹ ನಮ್ಮ ತಾಯಿ ನಮಗಾಗಿ ಫಾತಿಹಾ ಓದುತ್ತಿದ್ದರು. ಮುಂಜಾನೆಯಿಂದ ರಾತ್ರಿಯವರೆಗಿನ ನಮ್ಮೆಲ್ಲಾ ಪ್ರಾರ್ಥನೆಗಳಲ್ಲೂ ಫಾತಿಹಾ ಓದಲಾಗುತ್ತದೆ" ಎಂದು ಮಾಲೂಲ್ ಹೇಳಿದರು.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಡ್ರೆಸ್ಸಿಂಗ್ ರೂಂನಲ್ಲಿ ಮಾಲೂಲ್ ಹಾಗು ಟ್ಯುನಿಶಿಯ ಆಟಗಾರರು ಕುರ್ ಆನ್ ಅಧ್ಯಾಯವಾದ ಫಾತಿಹಾವನ್ನು ಓದುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News