ಅರ್ಜೆಂಟಿನಾ ಗೆಲುವಿನ ಸಂಭ್ರಮಾಚರಣೆಯಿಂದ ಮರಡೋನಾ ಅಸ್ವಸ್ಥ

Update: 2018-06-27 11:47 GMT

ಸೈಂಟ್ ಪೀಟರ್ಸ್ ಬರ್ಗ್, ಜೂ.27: ನೈಜೀರಿಯಾ ವಿರುದ್ಧದ ಪಂದ್ಯದ ಕೊನೆಯ ನಿಮಿಷಗಳಲ್ಲಿ ಅರ್ಜೆಂಟಿನಾ ಗೋಲು ದಾಖಲಿಸಿದಾಗ ಸಂಭ್ರಮಿಸಿದ ಫುಟ್ಬಾಲ್ ದಿಗ್ಗಜ ಡೀಗೋ ಮರಡೋನಾ ಅಸ್ವಸ್ಥಗೊಂಡಿರುವ ಬಗ್ಗೆ ವರದಿಯಾಗಿದೆ.

ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ನಿನ್ನೆ ನಡೆದ ಪಂದ್ಯದ ವೇಳೆ ಮರಡೋನಾ ಅರ್ಜೆಂಟಿನಾದ ಗೋಲು ದಾಖಲಿಸುತ್ತಿದ್ದಂತೆ ಭಾವುಕರಾಗಿದ್ದರು. 86ನೆ ನಿಮಿಷದಲ್ಲಿ ಮಾರ್ಕೋಸ್ ರೋಜೊ ಗೆಲುವಿನ ಗೋಲು ದಾಖಲಿಸಿದ ಸಂದರ್ಭ ಮರಡೋನಾ ಕುಣಿದು ಕುಪ್ಪಳಿಸಿದ್ದರು. ನಂತರ ಅವರು ಆಯಾಸಗೊಂಡು ಇಬ್ಬರ ಸಹಾಯದಿಂದ ನಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಮರಡೋನಾರನ್ನು ಇಬ್ಬರು ವೈದ್ಯರು ಪರೀಕ್ಷಿಸುತ್ತಿರುವ ಫೋಟೊಗಳು ಕೂಡ ವೈರಲ್ ಆಗಿತ್ತು.

ಇದೀಗ ಮರಡೋನಾ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News