×
Ad

ಕಸ ಸಂಸ್ಕರಣೆಯ ಸಣ್ಣ-ಸಣ್ಣ ಘಟಕ ತೆರೆಯಲು ಚಿಂತನೆ: ಡಾ.ಜಿ. ಪರಮೇಶ್ವರ್

Update: 2018-06-27 19:11 IST

ಬೆಂಗಳೂರು/ಕೊಪ್ಪಳ, ಜೂ. 27: ಗ್ರಾಮೀಣ ಭಾಗದಲ್ಲಿ ಕಸ ಸಂಸ್ಕರಣಾ ಘಟಕ ತೆರೆದಂತೆ ಬೆಂಗಳೂರು ನಗರದಲ್ಲಿಯೂ ಸಣ್ಣ-ಸಣ್ಣ ಸಂಸ್ಕರಣಾ ಘಟಕ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ಮುನಿರಾಬಾದ್‌ನ ಹೊಸಹಳ್ಳಿಯಲ್ಲಿ ಕಸ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಗ್ರಾಮೀಣ ಭಾಗದಲ್ಲಿಯೂ ಕಸ ಸಂಸ್ಕರಣಾ ಘಟಕ ತೆರೆದಿರುವುದು ಶ್ಲಾಘನೀಯ. ಇಂಥ ಘಟಕಗಳು ಎಲ್ಲ ಜಿಲ್ಲೆಗಳಲ್ಲೂ ತೆರೆದು, ಭವಿಷ್ಯದಲ್ಲಿ ಗ್ರಾಮೀಣಾ ಭಾಗದಲ್ಲಿ ಉಂಟಾಗುವ ಕಸದ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು ಎಂದರು.

ಈ ಭಾಗದಲ್ಲಿ ಕಸ ಸಂಸ್ಕರಣೆಯ ಸಣ್ಣ ಘಟಕ ತೆರೆದಿದ್ದಾರೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಎಲ್ಲಡೆ ಸಣ್ಣ ಘಟಕ ತೆರೆದರೆ, ಇನ್ನಷ್ಟು ಅನುಕೂಲವಾಗಲಿದೆ. ಬೆಂಗಳೂರು ಒಂದರಲ್ಲೇ ನಾಲ್ಕೂವರೆ ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಇದರ ಸಂಸ್ಕರಣೆಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News