ಬ್ಲಾಕ್ ಕ್ಯಾಶ್ ದಂಧೆ: ವಿದೇಶಿ ಪ್ರಜೆ ಬಂಧನ
Update: 2018-06-27 21:44 IST
ಬೆಂಗಳೂರು, ಜೂ.27: ವಿದೇಶಿ ಮೂಲದ ಬ್ಲಾಕ್ ಪೇಪರ್ ಪರಿವರ್ತಿಸಿ ಕರೆನ್ಸಿ ವಹಿವಾಟು ನಡೆಸುವುದಾಗಿ ವಂಚಿಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ.
ದೀಗಾಬೋ(28) ಬಂಧಿತ ಆರೋಪಿಯಾಗಿದ್ದು, ಇಲ್ಲಿನ ಬಾಣಸವಾಡಿಯಲ್ಲಿ ನೆಲೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರವಾಸಿ ವೀಸಾದಡಿಯಲ್ಲಿ ದೇಶಕ್ಕೆ ಬಂದಿರುವ ಆರೋಪಿಯು, ಓಎಂಬಿಆರ್ ಲೇಔಟ್‌ನಲ್ಲಿ ವಾಸ್ತವ್ಯ ಹೂಡಿದ್ದ. ಆನ್‌ಲೈನ್ ಮೂಲಕ ಸಾರ್ವಜನಿಕರನ್ನು ಪರಿಚಯಿಸಿಕೊಂಡು ತಾನು ಗುಪ್ತವಾಗಿ ಅಪಾರ ಪ್ರಮಾಣದಲ್ಲಿ ವಿದೇಶದಿಂದ ಕರೆನ್ಸಿಗಳನ್ನು ಕಪ್ಪುಬಣ್ಣದ ಪೇಪರ್ ರೂಪದಲ್ಲಿ ಮರೆಮಾಚಿ ತಂದಿದ್ದು, ಅದನ್ನು ಬದಲಾಯಿಸುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯಿಂದ 2 ಲಕ್ಷ ರೂ. ವೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ತಿಳಿಸಿದೆ.