ರಸಗೊಬ್ಬರ ಖರೀದಿಗೆ ಆಧಾರ್ ಕಡ್ಡಾಯ

Update: 2018-06-28 14:36 GMT

ಬೆಂಗಳೂರು, ಜೂ.28: ಕೇಂದ್ರ ಸರಕಾರದ ನೇರ ನೆರವು ವರ್ಗಾವಣೆ (ಡಿಬಿಟಿ) ಯೋಜನೆಯಡಿ ರಸಗೊಬ್ಬರ ಖರೀದಿಸುವ ರೈತರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.

ಸ್ವಂತ ಜಮೀನು ಹೊಂದಿರುವ ರೈತರ ಪರವಾಗಿ ಖರೀದಿಸುವವರು ಜಮೀನು ಹೊಂದಿದ ರೈತರ ಆಧಾರ್ ಪ್ರತಿಯನ್ನು ಸಲ್ಲಿಸಿ ಗೊಬ್ಬರ ಖರೀದಿಸಬಹುದಾಗಿದೆ. ಇನ್ನು, ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಪಾಸ್ ಮೂಲಕ ಮಾರಾಟ ಮಾಡಬೇಕು, ಇಲ್ಲವಾದಲ್ಲಿ ಅಂತಹ ಮಾರಾಟಗಾರರ ಪರವಾನಿಗೆ ರದ್ದು ಪಡಿಸಲಾಗುತ್ತದೆ. ಕೇಂದ್ರ ಸರಕಾರ ನಿಗದಿಪಡಿಸಿದಂತೆ 45 ಕೆ.ಜಿ ತೂಕದ ಯೂರಿಯಾ ರಸಗೊಬ್ಬರ ಚೀಲಗಳನ್ನು ಪೂರೈಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News