ಬಿಬಿಎಂಪಿ ನಿಜವಾಗಿಯೂ ಕೆಲಸ ಮಾಡುತ್ತಿದೆಯಾ: ಹೈಕೋರ್ಟ್ ಪ್ರಶ್ನೆ

Update: 2018-06-29 16:51 GMT

ಬೆಂಗಳೂರು, ಜೂ.29: ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಿಜವಾಗಿಯೂ ಕೆಲಸ ಮಾಡುತ್ತಿದೆಯಾ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಕಸ ವಿಲೇವಾರಿ ಟೆಂಡರ್ ಅನ್ನು ಬಿಬಿಎಂಪಿ ರದ್ದು ಮಾಡಿದ್ದನ್ನು ಪ್ರಶ್ನಿಸಿ ಮಾತಾ ಓವರ್‌ಸೀಸ್ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿ ಪರ ವಕೀಲರ ಮುಖಾಂತರ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತು.

ಪಾಲಿಕೆಯ ಪ್ರಮುಖ ಆದ್ಯತೆ ಸ್ವಚ್ಛತೆ ಆಗಿರಬೇಕು, ಕಸ ವಿಲೇವಾರಿ ಮತ್ತು ನಿರ್ವಹಣೆ ಬಿಬಿಎಂಪಿಯ ಆದ್ಯ ಕರ್ತವ್ಯವಾಗಬೇಕು, ಆದರೆ ಬಿಬಿಎಂಪಿ ನಡವಳಿಕೆಗಳು ಕಸ ವಿಲೇವಾರಿ ಬಗ್ಗೆ ಅದರ ಅಸಡ್ಡೆಯನ್ನು ಎತ್ತಿ ತೋರುತ್ತಿವೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಟೆಂಡರ್‌ಗೆ ಬ್ಯಾಂಕ್ ಭದ್ರತೆ ನೀಡಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿಯು ಕಸ ವಿಲೇವಾರಿ ಟೆಂಡರ್ ಅನ್ನು ರದ್ದು ಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಾತಾ ಓವರ್‌ಸೀಸ್ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News