ಸುಲಲಿತ ಹಜ್ ಯಾತ್ರೆಗೆ ಸೌಲಭ್ಯ: ಸೌದಿಗೆ ಶ್ಲಾಘನೆ

Update: 2018-06-30 17:26 GMT

ಜಿದ್ದಾ (ಸೌದಿ ಅರೇಬಿಯ), ಜೂ. 30: ಈ ವರ್ಷ 18,000 ಸಿರಿಯನ್ನರು ಸೇರಿದಂತೆ, ಉಮ್ರಾ ಮತ್ತು ಹಜ್ ನಿರ್ವಹಿಸಲು ಎರಡು ಪವಿತ್ರ ಮಸೀದಿಗಳಿಗೆ ಭೇಟಿ ನೀಡುವ ಎಲ್ಲ ಯಾತ್ರಿಕರನ್ನು ಸ್ವಾಗತಿಸಲು ಸೌದಿ ಅರೇಬಿಯ ಮಾಡಿರುವ ಏರ್ಪಾಡುಗಳನ್ನು ಮುಸ್ಲಿಮ್ ವರ್ಲ್ಡ್ ಲೀಗ್ (ಎಂಡಬ್ಲ್ಯುಎಲ್) ಮತ್ತು ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ) ಮಹಾಕಾರ್ಯದರ್ಶಿ ಡಾ. ಅಬ್ದುಲ್ಲತೀಫ್ ಬಿನ್ ರಶೀದ್ ಅಲ್-ಝಯನಿ ಶ್ಲಾಘಿಸಿದ್ದಾರೆ.

ಯಾತ್ರಿಕರ ಸುರಕ್ಷತೆಗಾಗಿ ತೆಗೆದುಕೊಳ್ಳಲಾಗಿರುವ ಕ್ರಮಗಳಿಗಾಗಿ ಅವರು ದೊರೆ ಸಲ್ಮಾನ್ ಮತ್ತು ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ಗೆ ಧನ್ಯವಾದ ಹೇಳಿದ್ದಾರೆ.

ಹಜ್ ಮತ್ತು ಉಮ್ರಾ ನಿರ್ವಹಿಸುವುದರಿಂದ ಸಿರಿಯನ್ನರನ್ನು ಸೌದಿಯ ಅಧಿಕಾರಿಗಳು ನಿಷೇಧಿಸಿದ್ದಾರೆ ಎಂಬ ಸುಳ್ಳು ಹೇಳಿಕೆಗಳನ್ನು ಮುಸ್ಲಿಮ್ ವರ್ಲ್ಡ್ ಲೀಗ್ ನಿರಾಕರಿಸಿದೆ. ಜಗತ್ತಿನಾದ್ಯಂತದ 80ಕ್ಕೂ ಅಧಿಕ ದೇಶಗಳ ಯಾತ್ರಿಗಳನ್ನು ಪ್ರತಿ ವರ್ಷ ಸೌದಿ ಅರೇಬಿಯವು ಯಾವುದೇ ತಾರತಮ್ಯವಿಲ್ಲದೆ ಸ್ವಾಗತಿಸುತ್ತದೆ ಹಾಗೂ ಅವರು ತಮ್ಮ ಧಾರ್ಮಿಕ ವಿಧಿಗಳನ್ನು ಸುಲಲಿತವಾಗಿ ನಿರ್ವಹಿಸುವಂತಾಗಲು ಜಾಗತಿಕ ದರ್ಜೆಯ ಸೇವೆಗಳನ್ನು ನೀಡುತ್ತಿದೆ ಎಂದು ಲೀಗ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News