ಬೆಂಗಳೂರು: ಬಿಇಟಿಎಲ್ ನಿಂದ ಟೋಲ್ ಶುಲ್ಕ ಹೆಚ್ಚಳ
Update: 2018-07-01 20:18 IST
ಬೆಂಗಳೂರು, ಜು.1: ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್ ಸಂಸ್ಥೆ(ಬಿಇಟಿಎಲ್) ಟೋಲ್ ಶುಲ್ಕ, ತಿಂಗಳ ಪಾಸು ಶುಲ್ಕವನ್ನು ಏರಿಕೆ ಮಾಡಲಾಗಿದ್ದು, ನಗರದ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಹೆಚ್ಚಿನ ಟೋಲ್ ಶುಲ್ಕ ಪಾವತಿ ಮಾಡಬೇಕಾಗಿದೆ.
ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ತಿಂಗಳ ಪಾಸು ಪಡೆದು ಸಂಚಾರ ನಡೆಸುವ ವಾಹನ ಸವಾರರಿಗೆ ಟೋಲ್ ಶುಲ್ಕ ಹೆಚ್ಚಳದ ಬಿಸಿ ತಟ್ಟಲಿದೆ. ಕಾರು ಮತ್ತು ಲೈಟ್ ಮೋಟಾರ್ ವಾಹನಗಳ ಶುಲ್ಕ 50 ರೂ.ಗಳು ಹಾಗೂ ಬಸ್ಸುಗಳಿಗೆ 105 ರೂ.ಗಳಷ್ಟು ಪಾವತಿ ಮಾಡಬೇಕಿದೆ.
ಕಾರುಗಳನ್ನು ಹೊರತುಪಡಿಸಿ ಉಳಿದ ವಾಹನಗಳಿಗೆ 5 ರೂ. ಶುಲ್ಕವನ್ನು ಏರಿಕೆ ಮಾಡಲಾಗಿದೆ. ದೊಡ್ಡ ವಾಹನಗಳಿಗೆ 10 ರೂ.ಗಳಷ್ಟು ದರ ಏರಿಕೆಯಾಗಿದೆ. ಅತ್ತಿಬೆಲೆ ಟೋಲ್‌ನಲ್ಲಿಯೂ ಕಾರುಗಳ ತಿಂಗಳ ಪಾಸುಗಳ ಶುಲ್ಕ 20 ರೂ.ಗೆ ಏರಿಕೆ ಮಾಡಲಾಗಿದೆ. ಒಮ್ಮೆ ಹೋಗಿಬರುವ ವಾಹನಗಳು 5 ರೂ. ಹೆಚ್ಚಿನ ದರವನ್ನು ಪಾವತಿ ಮಾಡಬೇಕಿದೆ.