ಬೆಂಗಳೂರು: ಎರಡು ಪಾಳಿಯಲ್ಲಿ ತರಗತಿಗಳಿಗೆ ಅನುಮತಿಗೆ ಪೋಷಕರಿಂದ ವಿರೋಧ

Update: 2018-07-01 14:53 GMT

ಬೆಂಗಳೂರು, ಜು.1: ಎರಡು ಪಾಳಿಗಳಲ್ಲಿ ತರಗತಿ ನಡೆಸಲು ಮಲ್ಲೇಶ್ವರದ ಕೇಂದ್ರೀಯ ವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅನುಮತಿ ನೀಡಿದ್ದು, ಅದಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರಸ್ತುತ ತರಗತಿಗಳು ಬೆಳಗ್ಗೆ 8:30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 2:40ಕ್ಕೆ ಮುಕ್ತಾಯವಾಗುತ್ತಿದೆ. ಆದರೆ, ಈಗ ಬೆಳಗ್ಗೆ 7 ಗಂಟೆಯಿಂದ 12.25ರ ವರೆಗೆ ಒಂದು ಪಾಳಿ ಹಾಗೂ ಮಧ್ಯಾಹ್ನ 12:30ರಿಂದ ಸಂಜೆ 6ರ ವರೆಗೆ ಎರಡನೆ ಪಾಳಿಯಲ್ಲಿ ತರಗತಿಗಳನ್ನು ನಡೆಸಲು ಕೇಂದ್ರಿಯ ವಿದ್ಯಾಲಯಕ್ಕೆ ಮಾನವ ಸಂಪನ್ಮೂಲ ಇಲಾಖೆ ಅನುಮತಿ ನೀಡಿತ್ತು.

ಒಂದನೇ ತರಗತಿಯಿಂದ 12ನೆ ತರಗತಿ ವರೆಗೂ ಮಲ್ಲೇಶ್ವರದ ಕೇಂದೀಯ ವಿದ್ಯಾಲಯದಲ್ಲಿ 1,836 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2017-18ನೆ ಶೈಕ್ಷಣಿಕ ವರ್ಷದಲ್ಲಿ ಮೊದಲನೇ ತರಗತಿಯ ಮೂರು ವಿಭಾಗಗಳಲ್ಲಿರುವ 120 ಸೀಟ್‌ಗಳಿಗೆ 3,040 ಅರ್ಜಿಗಳು ಬಂದಿದ್ದವು. ಪ್ರತಿ ಶೈಕ್ಷಣಿಕ ವರ್ಷದಲ್ಲೂ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಪೋಷಕರು ಎರಡು ಪಾಳಿಗಳಲ್ಲಿ ತರಗತಿಗಳನ್ನು ನಡೆಸಲು ವಿರೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News