ನಿಯಂತ್ರಣ ತಪ್ಪಿ ಮೋರಿಗಿಳಿದ ಬಿಎಂಟಿಸಿ ಬಸ್

Update: 2018-07-01 15:45 GMT

ಬೆಂಗಳೂರು, ಜು.1: ಚಾಲಿಸುತ್ತಿದ್ದ ಬಿಎಂಟಿಸಿ ಬಸ್‌ಯೊಂದು ನಿಯಂತ್ರಣ ತಪ್ಪಿ ಮೋರಿಯೊಂದಕ್ಕೆ ಇಳಿದ ಘಟನೆ ರವಿವಾರ ನಡೆದಿದೆ.

ನಗರದ ವಿಲ್ಸನ್‌ಗಾರ್ಡನ್‌ನ 3ನೆ ಕ್ರಾಸ್ ಬಳಿ ಬೆಳಗ್ಗೆ 10:30ರ ಸುಮಾರಿಗೆ ಚಂದಾಪುರ-ಅತ್ತಿಬೆಲೆ ಮಾರ್ಗದ ತೆರಳುವಾಗ ಚಾಲಕ ಅಜಾಗರೂಕತೆಯಿಂದ ವೇಗವಾಗಿ ಬಂದಾಗ ಬಸ್ ಮೋರಿಗೆ ಇಳಿದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ವಿಲ್ಸನ್‌ಗಾರ್ಡನ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News