ನಕಲಿ ಎನ್‍ಕೌಂಟರ್ ಆರೋಪ: ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2018-07-02 11:08 GMT

ಹೊಸದಿಲ್ಲಿ, ಜು.2: ಉತ್ತರ ಪ್ರದೇಶದಲ್ಲಿ ನಕಲಿ ಎನ್‍ಕೌಂಟರ್ ಗಳು ನಡೆದಿವೆ ಎಂದು ಪಿಯುಸಿಎಲ್ ದಾಖಲಿಸಿರುವ ಅರ್ಜಿಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ಎರಡು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

ಈ ಅರ್ಜಿಯ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶರುಗಳಾದ ಜಸ್ಟಿಸ್ ಡಿ. ವೈ. ಚಂದ್ರಚೂಡ್ ಹಾಗೂ ಜಸ್ಟಿಸ್ ಎ.ಎಂ. ಖನ್ವಿಲ್ಕರ್ ಅವರ ಪೀಠ ನಡೆಸುತ್ತಿದೆ.

ರಾಜ್ಯದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ 500 ಎನ್‍ಕೌಂಟರ್ ಗಳಲ್ಲಿ 58 ಜನರು ಸಾವಿಗೀಡಾಗಿದ್ದಾರೆಂದು ಅರ್ಜಿದಾರರ ಪರ ವಕೀಲ ಸಂಜಯ್ ಪಾರಿಖ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನೂ ಸೇರಿಸಲು ನ್ಯಾಯಾಲಯ ನಿರಾಕರಿಸಿದೆ.

ರಾಜ್ಯದಲ್ಲಿ ಆದಿತ್ಯನಾಥ್ ಸರಕಾರ ಕಳೆದ ವರ್ಷ ಅಧಿಕಾರಕ್ಕೆ ಬಂದಾಗಿನಿಂದ ನಡೆದ ಹಲವಾರು ವಿವಾದಾತ್ಮಕ ಎನ್ ಕೌಂಟರ್ ಗಳಲ್ಲಿ ಹಲವಾರು ಶಂಕಿತ ಗೂಂಡಾಗಳು ಹತ್ಯೆಗೀಡಾಗಿದ್ದರು. ಪೊಲೀಸರು ತಮ್ಮ ಅಧಿಕಾರವನ್ನು ಸ್ವಚ್ಛಂದದಿಂದ ಬಳಸಲು ಹಾಗೂ ಪ್ರತೀಕಾರ ತೀರಿಸಿಕೊಳ್ಳಲು ಅನುಮತಿಸುತ್ತಿರುವ  ಆಡಳಿತವನ್ನು ಪ್ರಶ್ನಿಸಿ ಮಾನವ ಹಕ್ಕು ಆಯೋಗ  ರಾಜ್ಯ ಸರಕಾರಕ್ಕೆ ಈ ವರ್ಷದ ಫೆಬ್ರವರಿಯಲ್ಲಿ ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News