ಬಿಬಿಎಂಪಿ ಮೇಯರ್ ಸಂಪತ್ ರಾಜ್‌ಗೆ ಜೀವ ಬೆದರಿಕೆ
Update: 2018-07-03 20:13 IST
ಬೆಂಗಳೂರು, ಜು.3: ಬಿಬಿಎಂಪಿ ಮೇಯರ್ ಆರ್.ಸಂಪತ್ ರಾಜ್ ಅವರಿಗೆ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಿಂದಲೇ ಕೊಲೆ ಬೆದರಿಕೆ ಬಂದಿರುವ ಆರೋಪ ಕೇಳಿಬಂದಿದೆ.
ಸೋಮವಾರ ಮುಂಜಾನೆ ಅಪರಿಚತ ವ್ಯಕ್ತಿಯೊಬ್ಬ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರಿಗೆ ಮೊಬೈಲ್ ಕರೆ ಮಾಡಿ, 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು, ಹಣ ಸೂಕ್ತ ಸಮಯಕ್ಕೆ ನೀಡದೆ ಇದ್ದಲ್ಲಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಪುನಃ, ಸಂಜೆ ಮೊಬೈಲ್‌ಗೆ ಕರೆ ಮಾಡಿ ಬೇಗ ಹಣ ನೀಡುವಂತೆ ಬೇಡಿಕೆಯಿಟ್ಟಿರುವುದಾಗಿ ತಿಳಿದುಬಂದಿದೆ.
ಬಳಿಕ ಕರೆ ಬಂದಿದ್ದ ಸಂಖ್ಯೆಯನ್ನು ಹುಡುಕಿದಾಗ ಅದು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ವ್ಯಾಪ್ತಿ ಎಂದು ಸೂಚಿಸಿದೆ. ಆದ್ದರಿಂದ ಜೈಲಿನಿಂದ ಅಥವಾ ಜೈಲಿನ ಅಕ್ಕಪಕ್ಕದಿಂದ ಕರೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿಗಾಗಿ ತನಿಖೆ ಕೈಗೊಂಡಿದ್ದಾರೆ.