×
Ad

ಬೈಕ್ ಖರೀದಿಸುವುದಾಗಿ ನಂಬಿಸಿ ವಂಚನೆ: ಬಂಧನ

Update: 2018-07-03 21:54 IST

ಬೆಂಗಳೂರು, ಜು.3: ಒಎಲ್‌ಎಕ್ಸ್ ಜಾಹೀರಾತಿನಲ್ಲಿ ನೋಡಿದ್ದ ಬೈಕ್ ಖರೀದಿಸುವುದಾಗಿ ನಂಬಿಸಿ ಬೈಕ್ ಕಳವು ಮಾಡಿದ್ದ ಪ್ರಕರಣ ಸಂಬಂಧ ಯುವಕನೊಬ್ಬನನ್ನು ಇಲ್ಲಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕೆಂಗೇರಿ ಉಪನಗರದ ಶಾಂತಿನಿವಾಸ್ ಲೇಔಟ್‌ನ ಭರತ್(27) ಬಂಧಿತ ಆರೋಪಿ ಆಗಿದ್ದಾನೆಎಂದು ಪೊಲೀಸರು ತಿಳಿಸಿದ್ದಾರೆ.

ಮಾರೇನಹಳ್ಳಿಯ ಪ್ರೀತಮ್ ಎಂಬಾತ ಬೈಕ್‌ಅನ್ನು ಮಾರಾಟ ಮಾಡುವುದಾಗಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಹಾಕಿದ್ದರು. ಅದನ್ನು, ನೋಡಿದ ಆರೋಪಿ ಭರತ್ ಜೂ.13 ರಂದು ಪ್ರೀತಮ್ ಅವರಿಗೆ ಬೈಕ್ ಖರೀದಿಸುವುದಾಗಿ ಯಲಹಂಕ ಸರಕಾರಿ ಆಸ್ಪತ್ರೆ ಬಳಿ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಬೈಕ್ ಅನ್ನು 45 ಸಾವಿರ ರೂ.ಗಳಿಗೆ ಖರೀದಿಸುವುದಾಗಿ ನಂಬಿಸಿದ ಆರೋಪಿ, ಬೈಕ್‌ನ ಸ್ಥಿತಿಗತಿ ನೋಡಿಕೊಂಡು ಬರುವುದಾಗಿ ಹೋದ ನಂತರ ವಾಪಸ್ಸು ಬರದೆ ಮೊಬೈಲ್ ಸಂಪರ್ಕ ಕಡಿತಗೊಳಿಸಿಕೊಂಡಿದ್ದ. ಬಳಿಕ ಪ್ರೀತಮ್ ಪೊಲೀಸರಿಗೆ ದೂರು ನೀಡಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈತನ ವಶದಲ್ಲಿದ್ದ 2 ಲಕ್ಷ ಮೌಲ್ಯದ 3 ಬೈಕ್‌ಗಳನ್ನು ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News