ಶಾಶ್ವತ ನೀರಾವರಿ ಯೋಜನೆಗೆ ಶಾಸಕ ಸಿ.ಟಿ.ರವಿ ಆಗ್ರಹ

Update: 2018-07-04 15:03 GMT

ಬೆಂಗಳೂರು, ಜು.4: ಚಿಕ್ಕಮಗಳೂರಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಶಾಶ್ವತ ನೀರಾವರಿ ಯೋಜನೆಯೊಂದನ್ನು ರೂಪಿಸಬೇಕು ಎಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

ಕಳೆದ ಸರಕಾರದ ಅವಧಿಯಲ್ಲಿ ಮಲೆನಾಡಿನ ಜನರಿಗೆ ಕುಡಿಯುವ ನೀರು ಒದಗಿಸಲು ಸಾಕಷ್ಟು ಶ್ರಮ ವಹಿಸಲಾಗಿತ್ತು. ಚಿಕ್ಕಮಗಳೂರಿನಲ್ಲಿ 5 ನದಿಗಳು ಹುಟ್ಟಿದರೂ ಕುಡಿಯುವ ನೀರಿನ ಸಮಸ್ಯೆಯಿದೆ. ಇಲ್ಲಿನ ನದಿ ನೀರನ್ನು ಬೇರೆ ಜಿಲ್ಲೆಗಳಿಗೆ ಪೂರೈಸಲಾಗುತ್ತದೆ. ಚಿಕ್ಕಮಗಳೂರು ಮಲೆನಾಡು ಪ್ರದೇಶವಾದ್ದರಿಂದ ಉತ್ತಮ ನೀರಾವರಿ ಯೋಜನೆ ರೂಪಿಸಿದರೆ ಕುಡಿಯುವ ನೀರಿಗೆ ಹಾಗೂ ರೈತರ ಕೃಷಿ ಕೆಲಸಗಳಿಗೆ ಸಹಾಯಕವಾಗುತ್ತದೆ ಎಂದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ, ಕೆರೆಗಳಿಗೆ ಮೊದಲು ನೀರು ತುಂಬಿಸಬೇಕು. ಯಾಕೆಂದರೆ ಅದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಮುಖ್ಯಮಂತ್ರಿ ಇಸ್ರೇಲ್ ಪದ್ಧತಿ ಅಳವಡಿಸುವ ಬಗ್ಗೆ ಮಾತನಾಡುವ ಬದಲು ಬೆಂಗಳೂರಿನ ಐಐಎಸ್ಸಿಗೆ ಭೇಟಿ ನೀಡಬೇಕು. ಅಲ್ಲಿನ ನೀರಾವರಿ ಯೋಜನೆಗಳ ಸಂಶೋಧನೆಗಳನ್ನು ಅಳವಡಿಸಿಕೊಂಡರೆ ಅತ್ಯುತ್ತಮವಾಗಿ ಜಲ ನಿರ್ವಹಣೆ ಮಾಡಬಹುದು ಎಂದು ಆಡಳಿತ ಪಕ್ಷವನ್ನು ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News