ಉದ್ಯಮಿ ನಾಪತ್ತೆ ಪ್ರಕರಣ: ನಾಲ್ಕು ವಿಶೇಷ ತಂಡ ರಚನೆ
Update: 2018-07-04 20:40 IST
ಬೆಂಗಳೂರು, ಜು.4: ನಾಪತ್ತೆಯಾಗಿರುವ ರಿಯಲ್ಎ ಸ್ಟೆಟ್ ಉದ್ಯಮಿ ಹಾಗೂ ಸ್ನೇಹಿತನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ.
ಆರ್‌ಆರ್ ನಗರದ ನಿವಾಸಿ, ರಿಯಲ್ ಎಸ್ಟೆಟ್ ಉದ್ಯಮಿ ಪ್ರಸಾದ್ ಬಾಬು ಎಂಬವರು ಜೂ.27 ರಂದು ನಿವೇಶನ ವ್ಯವಹಾರ ಸಂಬಂಧ ಮನೆಯಿಂದ ಹೊರ ಹೋಗಿ ನಾಪತ್ತೆಯಾಗಿರುವ ಆರೋಪ ಸಂಬಂಧ ಇಲ್ಲಿನ ಆರ್.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಸಾದ್ ಬಾಬು ಅವರೊಂದಿಗೆ ತೆರಳಿದ್ದ ಸ್ನೇಹಿತ, ಗಿರಿನಗರದ ನಿವಾಸಿ ಬಾಲಾಜಿ ಎಂಬುವರು ಸಹ ನಾಪತ್ತೆಯಾಗಿದ್ದು, ಈ ಬಗ್ಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಬ್ಬರು ನಿವೇಶನ ವ್ಯವಹಾರ ಸಂಬಂಧ ಜೆ.ಪಿ.ನಗರಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಜೂ.27ರಂದು ಹೋಗಿ ನಾಪತ್ತೆಯಾಗಿದ್ದಾರೆ. ಇವರಿಬ್ಬರ ಪತ್ತೆಗಾಗಿ ಡಿಸಿಪಿ ಶರಣಪ್ಪ4 ವಿಶೇಷ ತಂಡ ರಚಿಸಿದ್ದಾರೆ.