ಜಿ.ಟಿ.ದೇವೇಗೌಡ ಸಹಕಾರ ಸಚಿವರು ಎಂದು ಹೇಳಿ ಮುಜುಗರಕ್ಕೆ ಒಳಗಾದ ಜಯಮಾಲಾ

Update: 2018-07-04 16:45 GMT

ಬೆಂಗಳೂರು, ಜು.4: ಆಡಳಿತ ಪಕ್ಷದ ಸಭಾ ನಾಯಕಿ ಜಯಮಾಲಾ ಅವರು ವಿಧಾನ ಪರಿಷತ್‌ನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸಹಕಾರ ಸಚಿವರು ಎಂದು ತಪ್ಪಾಗಿ ಹೇಳಿ ಮುಜುಗರಕ್ಕೆ ಒಳಗಾದ ಘಟನೆ ನಡೆಯಿತು.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಸದನಕ್ಕೆ ಪರಿಚಯಿಸಿಕೊಟ್ಟ ಬಳಿಕ ಜಿ.ಟಿ.ದೇವೇಗೌಡ ಅವರನ್ನು ಸಹಕಾರ ಸಚಿವರು ಎಂದು ಹೇಳುವ ಮೂಲಕ ಮುಜುಗರಕ್ಕೆ ಒಳಗಾದರು. ಸಭಾಪತಿ ಬಸವರಾಜ ಹೊರಟ್ಟಿ, ಜಿ.ಟಿ.ದೇವೇಗೌಡ ಸಹಕಾರ ಸಚಿವರಲ್ಲ, ಉನ್ನತ ಶಿಕ್ಷಣ ಸಚಿವರು ಎಂದು ತಿದ್ದಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಸಭಾನಾಯಕಿ ಜಯಮಾಲಾ ತಪ್ಪುಸರಿಪಡಿಸಿಕೊಂಡರು.

ಬಸವರಾಜ ಹೊರಟ್ಟಿ ಬುಧವಾರ ಸದನದಲ್ಲಿ ಹಾಜರಿರಬೇಕಾದ ಎಲ್ಲ ಸಚಿವರು ಹಾಗೂ ಅಧಿಕಾರಿಗಳ ಹೆಸರುಗಳನ್ನು ಪ್ರಕಟಿಸಿದರು. ಬೆಳಗ್ಗಿನ ವೇಳೆ ಹಾಗೂ ಮಧ್ಯಾಹ್ನದ ವೇಳೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು ಮತ್ತು ಅಧಿಕಾರಿಗಳ ಹೆಸರುಗಳನ್ನು ಪ್ರಕಟಿಸಿ, ಎಲ್ಲರೂ ಸದನದಲ್ಲಿ ಇರಲೇಬೇಕು ಎಂದು ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News