ಬೆಂಗಳೂರು: ಪಬ್ ಮೇಲೆ ದಾಳಿ; 32 ಯುವತಿಯರ ರಕ್ಷಣೆ

Update: 2018-07-04 17:30 GMT

ಬೆಂಗಳೂರು, ಜು.4: ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪಬ್ ಮೇಲೆ ದಾಳಿ ನಡೆಸಿರುವ ಇಲ್ಲಿನ ಜೀವನ್ ಭಿಮಾ ನಗರ ಠಾಣಾ ಪೊಲೀಸರು 32 ಮಂದಿ ಯುವತಿಯರನ್ನು ರಕ್ಷಿಸಿ, 6 ಜನರನ್ನು ಬಂಧಿಸಿದ್ದಾರೆ.

ಯುವತಿಯರಿಂದ ಅಶ್ಲೀಲವಾಗಿ ನೃತ್ಯ ಮಾಡಿಸುತ್ತ ಮದ್ಯ ಸರಬರಾಜು ಮಾಡುತ್ತಿದ್ದ, ಜೆಪಿ ನಗರದ ಮ್ಯಾಂಗೊ ಟ್ರಿ ಪಬ್ ಮೇಲೆ ದಾಳಿ ನಡೆಸಿದ ಪೊಲೀಸರು, ಪಬ್‌ನ ಮುಖ್ಯಸ್ಥ ಸೇರಿ 6 ಮಂದಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಲೈವ್‌ಬ್ಯಾಂಡ್ ನಡೆಸಲು ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಆರೋಪಿಗಳು ಪಬ್‌ನಲ್ಲಿ ರಹಸ್ಯವಾಗಿ ಯುವತಿಯರಿಂದ ನೃತ್ಯ ಮಾಡಿಸಿ ಹಣ ಸುಲಿಗೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News