ಖಾಸಗಿ ಸಹಭಾಗಿತ್ವದಲ್ಲಿ ಮೂರು ವಿವಿ ಸ್ಥಾಪನೆ: ಕುಮಾರಸ್ವಾಮಿ
Update: 2018-07-05 20:27 IST
ಬೆಂಗಳೂರು, ಜು. 5: ತುಮಕೂರು, ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆ ಹಂಪಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ತಲಾ 3 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ತುಮಕೂರು ಜಿಲ್ಲೆಯಲ್ಲಿ ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದ ವಿಶ್ವ ವಿದ್ಯಾಲಯವನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.
ಸೈಬರ್ ಕ್ರೈಂ ಸೇರಿದಂತೆ ಭದ್ರತೆ ಪರಿಕಲ್ಪನೆಯಲ್ಲಿ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ‘ತಾಯಿನಾಡು ಭದ್ರತಾ ವಿಶ್ವ ವಿದ್ಯಾಲಯ’ ಹಾಗೂ ಪ್ರವಾಸಿ ಸ್ಥಳ ಮತ್ತು ಪ್ರವಾಸಿಗರ ಮಧ್ಯೆ ಭಾವನಾತ್ಮಕವಾಗಿ ಬೆಸೆಯುವ ಮಾನವ ಸಂಪನ್ಮೂಲ ತರಬೇತಿ ಮೂಲಕ ಉತ್ತೇಜಿಸಲು ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ವಿವಿಯನ್ನು ಹಂಪಿಯಲ್ಲಿ ಆರಂಭಿಸಲಾಗುವುದು ಎಂದರು.