ಮಗುವಿನ ಮೇಲೆ ಅತ್ಯಾಚಾರದ ಬೆದರಿಕೆ ಹಾಕಿದ 'ಹಿಂದುತ್ವ ಯೋಧ'ನ ಫೇಸ್ ಬುಕ್ ವಾಲ್ ನಲ್ಲಿ ಏನೇನಿವೆ ಗೊತ್ತಾ?

Update: 2018-07-07 14:13 GMT

ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿಯವರ ಹತ್ತು ವರ್ಷದ ಪುತ್ರಿಯನ್ನು ಅತ್ಯಾಚಾರಗೈಯ್ಯುವುದಾಗಿ ಬೆದರಿಸಿ ಟ್ವೀಟ್ ಮಾಡಿದ್ದ 'ಹಿಂದುತ್ವ ಯೋಧ' ಗಿರೀಶ್ ಮಹೇಶ್ವರಿ ಎಂಬಾತ ಜೈಲುಗಂಬಿ ಎಣಿಸುತ್ತಿದ್ದಾನೆ. "ಮಂಡ್ಸೌರ್ ನಲ್ಲಿ ಕೇವಲ ಒಂದು ಅತ್ಯಾಚಾರ ನಡೆದಿದೆ, ಅತ್ಯಾಚಾರ ನಡೆಸುವುದು ಮುಸ್ಲಿಮರ ಹಕ್ಕು. ನಮ್ಮ ಪಕ್ಷ ಇರ್ಫಾನ್ (ಅತ್ಯಾಚಾರಿ) ಜತೆಗಿದೆ'' ಎಂದು  ಮಂಡ್ಸೌರ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರಿಯಾಂಕಾ ಚತುರ್ವೇದಿಯವರದ್ದೆಂದು ಹೇಳಲಾಗಿದ್ದ ನಕಲಿ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದ ಗಿರೀಶ್, ಪ್ರಿಯಾಂಕಾರ ಪುತ್ರಿಯ ಮೇಲೆ ಅತ್ಯಾಚಾರಗೈಯ್ಯುವ ಬೆದರಿಕೆ ಹಾಕಿದ್ದ.

ಗಿರೀಶ್ ಮಹೇಶ್ವರಿಯ ವಯಸ್ಸು 36. ಆತನ ಫೇಸ್ ಬುಕ್ ಪುಟದಲ್ಲಿ ಆತ 'ಸಿಂಗಲ್' ಹಾಗೂ ಮಹಿಳೆಯರ ಬಗ್ಗೆ ಆಸಕ್ತನಾಗಿದ್ದಾನೆಂದು ಬರೆಯಲಾಗಿದೆ. ಆತ ಸ್ವಉದ್ಯೋಗಿ ಹಾಗೂ ಬಿಜೆಪಿ ಜತೆ `ಅಕೌಂಟಿಂಗ್ ಅಸೋಸಿಯೇಟ್' ಆಗಿ ಕೆಲಸ ಮಾಡುತ್ತಿದ್ದಾನೆಂದು ಹೇಳಿಕೊಂಡಿದ್ದಾನೆ.

ಆತನ 558 ಫೇಸ್ ಬುಕ್ ಗೆಳೆಯರ ಪೈಕಿ ಕೆಲವರ ಹೆಸರು `ಬಜರಂಗ್ ಮಂತ್ರಿ' ಎಂದಿದ್ದು, ಕೆಲವರು ಆರೆಸ್ಸೆಸ್ ಸಮವಸ್ತ್ರದಲ್ಲಿರುವ ಪ್ರೊಫೈಲ್ ಚಿತ್ರ ಹಾಕಿದ್ದಾರೆ.  ಆತ ತನ್ನ ಫೇಸ್ ಬುಕ್ ಪುಟದಲ್ಲಿ ಅಪ್ ಲೋಡ್ ಮಾಡಿರುವ ಹಲವು ಪೋಸ್ಟ್ ಗಳು ಪಬ್ಲಿಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳಿಗೆ ಅತ್ಯಾಚಾರ ಬೆದರಿಕೆ ಹಾಕುವ ಆತನ ಮನಃಸ್ಥಿತಿ ಏನೆಂಬುದನ್ನು ತೋರಿಸುತ್ತದೆ.

ಹಿಂದುತ್ವ, ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನು ಬೆಂಬಲಿಸಿ ಹಾಗೂ ಕಾಂಗ್ರೆಸ್ ವಿರೋಧಿಸಿ ಹಲವಾರು ಪೋಸ್ಟ್ ಗಳನ್ನು ಆತ ಮಾಡಿದ್ದಾನೆ. ಒಂದು ಫೋಟೋಶಾಪ್ ಮಾಡಲ್ಪಟ್ಟ ಚಿತ್ರದಲ್ಲಿ ಕತ್ತಿಯಿಂದ ತಲೆ ಕಡಿಯಲ್ಪಟ್ಟ ಮುಸ್ಲಿಂ ವ್ಯಕ್ತಿಯ ಚಿತ್ರವಿದೆ. ನರೇಂದ್ರ ಮೋದಿಯನ್ನು ಹಿಂದು ರಾಜನಂತೆ ಆತ ಬಿಂಬಿಸಿದ್ದಾನೆ. ಕೆಲವು ಇತರ ಪೋಸ್ಟ್ ಗಳಲ್ಲಿ ಆತ ಯುವತಿಯರನ್ನು 'ಲೈಂಗಿಕ ವಸ್ತು'ಗಳೆಂಬಂತೆ ಬಿಂಬಿಸಿದ್ದಾನೆ.

ಆತನ ವಾಲ್ ನಲ್ಲಿರುವ ಕೆಲ ಪೋಸ್ಟ್ ಗಳು ಈ ಕೆಳಗಿದ್ದು, ಅಶ್ಲೀಲತೆಯ ಕಾರಣದಿಂದ ಕೆಲವನ್ನು ಬ್ಲರ್ ಮಾಡಲಾಗಿದೆ.

ಕೆಲವೊಮ್ಮೆ ಯುವತಿಯರ ಫೋಟೋ ಪೋಸ್ಟ್ ಮಾಡಿ ಆತನಿಗೆ ಕರೆ ಮಾಡುವಂತೆ ಆತ ಹೇಳುತ್ತಿದ್ದ.

ಪ್ರಿಯಾಂಕ ಚತುರ್ವೇದಿ ಪುತ್ರಿಯನ್ನು ಅತ್ಯಾಚಾರಗೈಯುವುದಾಗಿ ಗಿರೀಶ್ ಮಹೇಶ್ವರಿ ಟ್ವೀಟ್ ಮಾಡಿದ ನಂತರ ಹಲವರು ಆತನನ್ನು ಬೆಂಬಲಿಸಿದ್ದಾರೆ.

ಕೃಪೆ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News