ಉನ್ನತ ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ: ರಾಮ್ ನಾಥ್ ಕೋವಿಂದ್

Update: 2018-07-07 16:24 GMT

ಪಣಜಿ, ಜು. 7: ಜಗತ್ತಿನಲ್ಲಿ ಭಾರತ ಮೂರನೇ ಅತಿ ದೊಡ್ಡ ಶಿಕ್ಷಣ ವ್ಯವಸ್ಥೆ ಆಗಿದ್ದರೂ ಉನ್ನತ ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ ಹೇಳಿದ್ದಾರೆ. ಹೊಸ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಉನ್ನತ ಶಿಕ್ಷಣವನ್ನು ವಿಸ್ತರಿಸುವುದರಲ್ಲಿ ಭಾರತ ಉತ್ತಮ ಸಾಧನೆ ತೋರಿದೆ. ಆದರೆ, ಅತಿ ದೊಡ್ಡ ಸವಾಲು ಎಂದರೆ ಗುಣಮಟ್ಟ ಸುಧಾರಿಸುವುದು ಎಂದು ಅವರು ಹೇಳಿದರು. ಇಲ್ಲಿನ ದೋನಾ ಪೌಲಾದಲ್ಲಿ ಗೋವಾ ವಿಶ್ವವಿದ್ಯಾನಿಲಯದ 30ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ‘‘ಭಾರತದಲ್ಲಿ ಉನ್ನತ ಶಿಕ್ಷಣ ಎಲ್ಲರಿಗೂ ಸಿಗುವುದಿಲ್ಲ ಎಂಬುದನ್ನು ಯುವ ಜನಾಂಗ ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು. ಗೋವಾ ವಿಶ್ವವಿದ್ಯಾನಿಲಯದಂತಹ ಶಿಕ್ಷಣ ಸಂಸ್ಥೆ ಉಳಿದುಕೊಳ್ಳಲು ಅಸಂಖ್ಯಾತ ನಾಗರಿಕ ಕೊಡುಗೆ ಇದೆ. ಅದರಲ್ಲಿ ಹೆಚ್ಚಿನವರನ್ನು ಗುರುತಿಸಲು ಕೂಡ ನಮಗೆ ಸಾಧ್ಯವಾಗಲಾರದು’’ ಎಂದು ಕೋವಿಂದ್ ಹೇಳಿದ್ದಾರೆ. ಉನ್ನತ ಶಿಕ್ಷಣ ವಿಸ್ತರಿಸಲು ಹಾಗೂ ಒಳಗೊಳಿಸಲು ಸರಕಾರ ಹಾಗೂ ಇತರ ಸಂಬಂಧಿತರು ಹೆಚ್ಚಿನ ಮಹತ್ವ ನೀಡಿದ್ದಾರೆ. ಜಗತ್ತಿನಲ್ಲಿ ಭಾರತ ಅತಿ ದೊಡ್ಡ ಶಿಕ್ಷಣ ವ್ಯವಸ್ಥೆ. ಇದು ಅತಿ ದೊಡ್ಡ ಯುವ ಜನಸಂಖ್ಯೆಯನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News