ಐಎಸ್‌ಎಫ್ ಕುವೈತ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2018-07-09 06:55 GMT

ಕುವೈತ್, ಜು.9: ಕುವೈತ್‌ನಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯರನ್ನೊಳಗೊಂಡ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಯಾದ ಇಂಡಿಯನ್ ಸೋಶಿಯಲ್ ಫೋರಂ(ಐಎಸ್‌ಎಫ್) ಮಹಾಸಭೆಯು ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಕೇಂದ್ರ ಸಮಿತಿಗೆ 2018-2021ರ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್, ಉಪಾಧ್ಯಕ್ಷರಾಗಿ ತಾಯಿಫ್ ಅಹ್ಮದ್, ಕಾರ್ಯದರ್ಶಿಯಾಗಿ ಕೆ.ಎ.ಹಸನ್ ಅಲಿ, ಸಂಚಾಲಕ(ಕಲ್ಯಾಣ ಚಟುವಟಿಕೆ)ರಾಗಿ ಅಶ್ರಫ್ ಕಲತ್ತೋಡು, ಮಾಧ್ಯಮ ಸಂಚಾಲಕರಾಗಿ ಫಯಾಝ್ ಹಸನ್ ಆಯ್ಕೆಯಾಗಿದ್ದಾರೆ.

ಸಮಿತಿಯ ಸದಸ್ಯರಾಗಿ ಝಕರಿಯ ಎಂ., ಸಫೀರ್ ಅಬ್ದುಲ್ ವಹೀದ್, ಎ. ಶಕೀಲ್ ಅಹ್ಮದ್, ಕಿಫಾಯತುಲ್ಲಾ, ಮುಹಮ್ಮದ್ ರಫೀಕ್ ಹಾಗೂ ಮುಹಮ್ಮದ್ ಅಶ್ಫಾಕ್ ಆಯ್ಕೆಯಾದರು.

ಸಭೆಯಲ್ಲಿ ಐಎಸ್‌ಎಫ್‌ನ ಎಲ್ಲ ರಾಜ್ಯ ಸಮಿತಿಗಳ ಹಾಗೂ ಕೇಂದ್ರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿರ್ಗಮನ ಪ್ರಧಾನ ಕಾರ್ಯದರ್ಶಿ ತಾಯಿಫ್ ಅಹ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News