ಬಿ.ಎ. ಮೊಹಿದಿನ್ ನಿಧನ: ಇಂಡಿಯನ್ ಸೋಶಿಯಲ್ ಪೋರಂ, ಈಸ್ಟರ್ನ್ ಪ್ರಾವಿನ್ಸ್ ಘಟಕ ಸಂತಾಪ

Update: 2018-07-10 16:21 GMT

ರಿಯಾದ್, ಜು. 10: ಹಿರಿಯ ಮುತ್ಸದ್ದಿ, ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರ ನಿಧನಕ್ಕೆ ಇಂಡಿಯನ್ ಸೋಶಿಯಲ್ ಫೋರಮ್ (ಐಎಸ್ಎಫ್) ಸಂತಾಪ ವ್ಯಕ್ತಪಡಿಸಿದೆ.

ಬಿ.ಎ. ಮೊಹಿದಿನ್ ಅವರು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗದೆ ಸಮುದಾಯದೊಳಗಿನ ಸಮಸ್ಯೆಗಳನ್ನು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಪರಿಹರಿಸುವಲ್ಲಿ ಸಮುದಾಯಕ್ಕೆ ನೇತೃತ್ವವನ್ನು ನೀಡುತಿದ್ದರು. ಜೀವನದುದ್ದಕ್ಕೂ ಜಾತ್ಯತೀತ ಸಿದ್ಧಾಂತವನ್ನು ನಂಬಿಕೊಂಡಿದ್ದ ಅವರ ನಿಧನ ಜಿಲ್ಲೆಗೆ ಹಾಗು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಇಂಡಿಯನ್ ಸೋಶಿಯಲ್ ಫೋರಮ್, ಈಸ್ಟರ್ನ್ ಪ್ರಾವಿನ್ಸ್ ಸೌದಿ ಅರೇಬಿಯಾ ಕರ್ನಾಟಕ ಘಟಕ ಸಂತಾಪ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News