ಅನಧಿಕೃತ ಕೇಬಲ್ ಅಳವಡಿಕೆಗೆ 25 ಲಕ್ಷ ದಂಡ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಜು. 10: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಓಎಫ್‌ಸಿ ಕೇಬಲ್‌ಗಳನ್ನು ರಸ್ತೆಗಳಲ್ಲಿ ಮತ್ತು ಮರಗಳ ಮೇಲೆ ನೇತುಹಾಕಿರುವ ಕಂಪೆನಿಗಳಿಗೆ 25 ಲಕ್ಷ ರೂ. ದಂಡ ಮತ್ತು ಅನಧಿಕೃತವಾಗಿ ಕೇಬಲ್‌ಗಳ ಅಳವಡಿಕೆಗೆ ರಸ್ತೆ ಕತ್ತರಿಸಿದ್ದಲ್ಲಿ 10 ಲಕ್ಷ ರೂ.ಗಳ ದಂಡವನ್ನು ವಿಧಿಸಲು ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತಿ್ರ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಸ್ತೆಗಳು ಮತ್ತು ಮರಗಳ ಮೇಲೆ ಅನಧಿಕೃತವಾಗಿ ಕೇಬಲ್‌ಗಳನ್ನು ಯಾರು ಹಾಕಿರುತ್ತಾರೋ ಅವುಗಳನ್ನು ಪತ್ತೆಹಚ್ಚಿ ತೆರವುಗೊಳಿಸಲಾಗುವುದು ಹಾಗೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ 8,860 ಕಿಲೋ ಮೀಟರ್‌ಗಳಷ್ಟು ಕೇಬಲ್‌ಗಳನ್ನು ಅಳವಡಿಸಲು ಅನುಮತಿ ನೀಡಲಾಗಿದ್ದು, ಇದರಿಂದ 620 ಕೋಟಿ ರೂ.ಶುಲ್ಕವನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.