ಹಿರಿಯ ಸಂಶೋಧಕ ಚಿದಾನಂದ ಮೂರ್ತಿಗೆ ಗೌರವ ಡಾಕ್ಟರೇಟ್
Update: 2018-07-10 21:15 IST
ಬೆಂಗಳೂರು, ಜು.10: ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರಿಗೆ ಕರ್ನಾಟಕ ಕೇಂದ್ರೀಯ ವಿವಿಯು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ.
ಜು.13ರ ಬೆಳಗ್ಗೆ 10ಗಂಟೆಗೆ ನಡೆಯುವ 3ನೇ ಘಟಿಕೋತ್ಸವದಲ್ಲಿ ವಿವಿಯ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಅನಿಲ್ ಡಿ. ಸಹಸ್ರಬುದ್ಧೆ ಪದವಿ ಪ್ರದಾನ ಮಾಡಲಿದ್ದಾರೆಂದು ಎಂದು ವಿವಿ ಕುಲಪತಿ ಎಚ್.ಎಂ.ಮಹೇಶ್ವರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.