ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

Update: 2018-07-11 07:02 GMT

ಪ್ಯಾರಿಸ್, ಜು.11: ಫ್ರಾನ್ಸನ್ನು ಏಳನೇ ಸ್ಥಾನಕ್ಕೆ ತಳ್ಳಿದ ಭಾರತ, ವಿಶ್ವದ 6ನೆ ಆರ್ಥಿಕತೆಯಾಗಿ ರೂಪುಗೊಂಡಿದೆ ಎಂದು ವಿಶ್ವಬ್ಯಾಂಕ್ ನ 2017ರ ಅಂಕಿ ಅಂಶಗಳು ತಿಳಿಸಿವೆ.

ಭಾರತದ ಜಿಡಿಪಿ 2.597 ಲಕ್ಷ ಕೋಟಿ ಡಾಲರ್ ಆಗಿದ್ದು, ಕಳೆದ ವರ್ಷ ಫ್ರಾನ್ಸ್‍ನ ಒಟ್ಟು ಜಿಡಿಪಿ 2.582 ಲಕ್ಷ ಕೋಟಿ ಡಾಲರ್ ಆಗಿದೆ. ಹಲವು ತ್ರೈಮಾಸಿಕಗಳ ಅವಧಿಯ ನಿಧಾನಗತಿಯ ಬಳಿಕ 2017ರ ಜುಲೈನಿಂದೀಚೆಗೆ ದೇಶದ ಆರ್ಥಿಕತೆ ಪ್ರಬಲವಾಗಿ ಚೇತರಿಕೆ ಕಂಡಿದ್ದು, 134 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತ ವಿಶ್ವದ ಅತಿಹೆಚ್ಚು ಜನಸಂಖ್ಯಾ ಸಂಪನ್ಮೂಲವಿರುವ ರಾಷ್ಟ್ರವಾಗುವ ನಿಟ್ಟಿನಲ್ಲಿ ದಾಪುಗಾಲು ಹಾಕಿದೆ.

ಫ್ರಾನ್ಸ್‍ನ ಜನಸಂಖ್ಯೆ 67 ದಶಲಕ್ಷ ಮಾತ್ರ. ಆದ್ದರಿಂದ ಭಾರತದ ತಲಾದಾಯವನ್ನು ನೋಡಿದರೆ ಇದು ಫ್ರಾನ್ಸ್‍ಗಿಂತ ತೀರಾ ಕಡಿಮೆ ಇದೆ. ಫ್ರಾನ್ಸ್‍ನ ತಲಾದಾಯ ಭಾರತೀಯರ ತಲಾದಾಯಕ್ಕಿಂತ 20 ಪಟ್ಟು ಅಧಿಕ ಎಂದು ವಿಶ್ವಬ್ಯಾಂಕ್ ಅಂಕಿ ಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News