ಬಡದೇವರುಗಳಿಗೆ ಮರೆಯದೆ ಅನುದಾನ ಒದಗಿಸಿ: ಕೆ.ಬಿ.ಶರಣಪ್ಪ

Update: 2018-07-11 16:58 GMT

ಬೆಂಗಳೂರು, ಜು. 11: ಮುಜರಾಯಿ ಇಲಾಖೆ ಸಚಿವರಾದರೆ ಅಧಿಕಾರ ಹೋಗುತ್ತದೆಯೇ ಎಂಬ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬಡದೇವರುಗಳಿಗೆ ಅನುದಾನ ಒದಗಿಸದಿದ್ದಲ್ಲಿ ಆ ದೇವರಗಳ ಶಾಪ ತಟ್ಟುತ್ತದೆ. ಅನುದಾನ ಒದಗಿಸಿದರೆ ಅಧಿಕಾರ ಹೋಗುವುದಿಲ್ಲ ಎಂಬ ಬಗ್ಗೆ ಕೆಲ ಸದಸ್ಯರು ತಮ್ಮದೇ ದಾಟಿಯಲ್ಲಿ ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಅವರ ಗಮನಕ್ಕೆ ತಂದರು.

ಜೆಡಿಎಸ್‌ನ ಸಂದೇಶ್ ನಾಗರಾಜ್, ಮುಜರಾಯಿ ಸಚಿವರಾಗಿದ್ದೀರ, ಅಧಿಕಾರ ಹೋಗಬಹುದು ಎಂದರು. ಅದಕ್ಕೆ ತಿರುಗೇಟು ನೀಡಿದ ಸಚಿವ ರಾಜಶೇಖರ ಪಾಟೀಲ್ ಅವರು ನನಗೆ ಮುಜರಾಯಿ ಸ್ಥಾನ ನೀಡಿದ್ದಾರೆ. ಸಚಿವನಾಗಿ ಸೇವೆ ಸಲ್ಲಿಸುವೆ. ಅಧಿಕಾರ ಬರುತ್ತದೆ, ಹೋಗುತ್ತದೆ ಈ ಬಗ್ಗೆ ನಾನೇನು ತಲೆಕೆಡಿಸಿಕೊಂಡಿಲ್ಲ ಎಂದರು. ಮಧ್ಯೆ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ನಿಮ್ಮ ಮಂತ್ರಿಗಿರಿ ಹೋಗುವುದಿಲ್ಲ ಬಿಡಿ, ಎಂದು ಸಚಿವರಿಗೆ ಧೈರ್ಯ ತುಂಬಿದರು.

ಕಾಂಗ್ರೆಸ್‌ನ ಕೆ.ಬಿ. ಶರಣಪ್ಪ ಅವರು ಶ್ರೀಮಂತ ದೇವರುಗಳಿಗೆ ಮಾತ್ರವೇ ಅನುದಾನ ನೀಡಬೇಡಿ, ಮುರುಗಮ್ಮ, ದುರ್ಗಮ್ಮನಂತಹ ನೂರಾರು ಬಡದೇವರುಗಳಿವೆ. ಆ ದೇವರನ್ನು ಮರೆಯಬೇಡಿ. ಮುಖ್ಯಮಂತ್ರಿಗಳಿಗೆ ಒತ್ತಡ ತಂದಾದರೂ ಸಣ್ಣ ದೇವರುಗಳಿಗೆ ಕರುಣೆ ತೋರಿ ಎಂದರು.
ರಾಜ್ಯದಲ್ಲಿ 34556 ದೇವಾಲಯಗಳಿವೆ. ಅನುದಾನದ ಬೇಡಿಕೆ ಹೆಚ್ಚಿದೆ. ಆದರೆ ಅನುದಾನ ಕಡಿಮೆಯಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 126 ಕೋಟಿ ರೂ. ಅನುದಾನ ಮಾತ್ರವೇ ಬಿಡುಗಡೆಯಾಗಿದೆ ಎಂದು ಸಚಿವ ರಾಜಶೇಖರ್ ಪಾಟೀಲ್ ಅವರು ಅಸಹಾಯಕತೆಯನ್ನು ವ್ಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News