8 ವರ್ಷಗಳ ಬಳಿಕ ಸಿಕ್ಕಿಬಿದ್ದ ದೈತ್ಯ ಮೊಸಳೆ

Update: 2018-07-12 18:30 GMT

ಆಸ್ಟ್ರೇಲಿಯಾದಲ್ಲಿ ಕಾಣೆಯಾಗಿದ್ದ 8 ವರ್ಷಗಳ ಬಳಿಕ ಕೊನೆಗೂ 600 ಕಿ.ಗ್ರಾಂ. ತೂಕದ ದೈತ್ಯಾಕಾರದ ಉಪ್ಪು ನೀರಿನ ಮೊಸಳೆಯೊಂದನ್ನು ಹಿಡಿಯಲಾಗಿದೆ.

ಕ್ಯಾಥರಿನ್‌ನ ಉತ್ತರದ ಔಟ್‌ಬ್ರೇಕ್ ಪಟ್ಟಣದಲ್ಲಿ ಜಲಪಾತದಿಂದ 4.7 ಮೀಟರ್ ಉದ್ದದ ಈ ಮೊಸಳೆಯನ್ನು ಹಿಡಿಯಲಾಗಿದೆ. 2010ರಲ್ಲಿ ಈ ಮೊಸಳೆಯನ್ನು ಪತ್ತೆ ಹಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದಾಜು 60 ವರ್ಷ ಪ್ರಾಯದ ಈ ಮೊಸಳೆಯನ್ನು ಹಿಡಿಯಲು ಸಂಬಂಧಿಸಿದ ಅಧಿಕಾರಿಗಳು ಕಳೆದ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು.
 ‘‘ನಾವು ಕಳೆದ ಕೆಲವು ವರ್ಷಗಳಿಂದ ಈ ಮೊಸಳೆಯನ್ನು ಹಿಡಿಯಲು ಶತಪ್ರಯತ್ನ ಮಾಡುತ್ತಿದ್ದೆವು’’ ಎಂದು ಹಿರಿಯ ವನ್ಯ ಜೀವಿ ಅಧಿಕಾರಿ ಜೋನ್ ಬರ್ಕೆ ತಿಳಿಸಿದ್ದಾರೆ.
‘‘ಈ ಮೊಸಳೆಯನ್ನು ಮೊಸಳೆಗಳ ಫಾರ್ಮ್ ಗೆ ಕೊಂಡೊಯ್ದು ಅಲ್ಲಿ ಅದನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ’’ ಎಂದು ಉತ್ತರ ಭಾಗದ ವನ್ಯ ಜೀವಿ ಕಾರ್ಯಾಚರಣೆ ವರಿಷ್ಠ ಟ್ರೇಸಿ ಡುಲ್ಡಿಗ್ ಹೇಳಿದ್ದಾರೆ.
ವನ್ಯ ಜೀವಿ ಘಟಕ ಕ್ಯಾಥರಿನ್ ನದಿಯಿಂದ ಹಿಡಿದ ಅತಿ ದೊಡ್ಡ ಮೊಸಳೆ ಇದಾಗಿದೆ.
ಆಸ್ಟ್ರೇಲಿಯಾದ ಉತ್ತರ ಭೂಭಾಗದಲ್ಲಿ ಉಪ್ಪು ನೀರಿನಲ್ಲಿ ದೈತ್ಯ ಮೊಸಳೆಗಳು ಸಾಮಾನ್ಯವಾಗಿ ಪ್ರತಿವರ್ಷ ಇಬ್ಬರನ್ನು ಕೊಲ್ಲುತ್ತಿವೆಯಂತೆೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News