ಸಾವಿನ ಸೇತುವೆಗಳು

Update: 2018-07-12 18:46 GMT

ಮಾನ್ಯರೇ,

ಬಾಗಲಕೋಟೆ ಜಿಲ್ಲೆಯ ಚಿಕ್ಕ ಗಲಗಲಿ ಹಳೆಯ ಸೇತುವೆಯ ಮೇಲೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ಬೀಸಿದ ಮಳೆ ಗಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪರಿಣಾಮ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ತಂದೆ ಮತ್ತು 2 ವರ್ಷದ ಅವರ ಪುತ್ರಿ ಕೃಷ್ಣ ನದಿ ಪಾಲಾಗಿ ಮೃತಪಟ್ಟ ದುರ್ಘಟನೆ ಸಂಭವಿಸಿತು. ಇದು ಮರೆಯುವ ಮುನ್ನವೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ವಿನ ಕಾಲುಸಂಕ ದಾಟುವ ಸಮಯದಲ್ಲಿ 14 ವರ್ಷದ ವಿದ್ಯಾರ್ಥಿನಿ ನೀರಿನ ಸೆಳವಿಗೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಹೃದಯವಿದ್ರಾವಕ ದುರಂತ ಘಟನೆಯೊಂದು ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿ.
ರಾಜ್ಯದ ಅದೆಷ್ಟು ನದಿ, ಕೆರೆ, ಹಳ್ಳಗಳಲ್ಲಿ ಜನರು ದಾಟಿಕೊಂಡು ಹೋಗಲು ಸೂಕ್ತವಾದ ಸೇತುವೆ ನಿರ್ಮಾಣ ಹಾಗೂ ಇನ್ನಿತರ ಸಮರ್ಪಕವಾದ ವ್ಯವಸ್ಥೆಗಳು ಇಲ್ಲದಿರುವುದರಿಂದ ಮಳೆಗಾಲ ಆಥವಾ ಪ್ರವಾಹ ಉಂಟಾದ ಸಮಯದಲ್ಲಿ ಇಂತಹ ಅಹಿತಕರ ದುರ್ಘಟನೆಗಳು ಪ್ರತಿ ವರ್ಷವೂ ಸಂಭವಿಸುತ್ತಿವೆ. ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ದುರಂತಗಳು ಸಂಭವಿಸುತ್ತಿರುವುದು ರಾಜ್ಯದ ಜನಪ್ರತಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News