ಅಸ್ತಮಾ ರೋಗಿಗಳು ಅಗತ್ಯ ಸೇವಿಸಲೇಬೇಕಾದ ಆಹಾರಗಳು

Update: 2018-07-14 11:03 GMT

ಉತ್ತಮ ಆರೋಗ್ಯವನ್ನು ಹೊಂದಲು ನಿಯಮಿತ ವ್ಯಾಯಾಮದಂತೆ ಆರೋಗ್ಯಕರ ಆಹಾರವೂ ಮುಖ್ಯವಾಗಿದೆ. ಇದು ಅಸ್ತಮಾ ರೋಗಿಗಳಿಗೂ ಅನ್ವಯಿಸುತ್ತದೆ. ಆದರೆ ಅಸ್ತಮಾವನ್ನು ನಿಯಂತ್ರಣದಲ್ಲಿರಿಸಲು ಯಾವುದೇ ನಿರ್ದಿಷ್ಟ ಆಹಾರವಿಲ್ಲವಾದರೂ ಶ್ವಾಸಕೋಶದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸಲು ನೆರವಾಗುವ ಕೆಲವು ಆಹಾರಗಳಿವೆ.

ಅಸ್ತಮಾ ರೋಗಿಗಳು ತಮ್ಮ ಆಹಾರ ಕ್ರಮದಲ್ಲಿ ಅತ್ಯಗತ್ಯವಾಗಿ ಸೇರಿಸಿಕೊಳ್ಳಬೇಕಾದ ಕೆಲವು ಪೌಷ್ಟಿಕಾಂಶಗಳ ಕುರಿತು ಮಾಹಿತಿಗಳಿಲ್ಲಿವೆ........

ವಿಟಾಮಿನ್ ಡಿ ಸಮೃದ್ಧ ಆಹಾರಗಳು

ಮಕ್ಕಳು ಸೇರಿದಂತೆ ಅಸ್ತಮಾ ರೋಗಿಗಳು ವಿಟಾಮಿನ್ ಡಿ ಸೇವನೆಯನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ವಿಟಾಮಿನ್ ಡಿ ಸೇವನೆಯು ಮಕ್ಕಳಲ್ಲಿ ಅಸ್ತಮಾ ಉಲ್ಬಣಗೊಳ್ಳುವುದನ್ನು ಶೇ.300 ರಷ್ಟು ತಗ್ಗಿಸುತ್ತದೆ ಎನ್ನುವುದನ್ನು ಕಳೆದ ವರ್ಷ ನಡೆಸಿದ ಅಧ್ಯಯನವೊಂದು ತೋರಿಸಿದೆ. ಅಲ್ಲದೆ ಅಲ್ಪಾವಧಿಯಲ್ಲಿ ಮಕ್ಕಳ ಮೆಲೆ ಅಸ್ತಮಾ ದಾಳಿಗಳ ಸಂಖ್ಯೆಯನ್ನೂ ಅದು ತಗ್ಗಿಸುತ್ತದೆ.

ವಯಸ್ಕರು ವಿಟಾಮಿನ್ ಡಿ ಪೂರಕಗಳನ್ನು ಸೇವಿಸುವುದರಿಂದ ಅವರಲ್ಲಿ ಅಸ್ತಮಾದ ಬಾಧೆಯ ತೀವ್ರತೆಯು ಕಡಿಮೆಯಾಗುತ್ತದೆ ಮತ್ತು ಅವರ ಶ್ವಾಸಕೋಶಗಳ ಕಾರ್ಯ ನಿರ್ವಹಣೆ ಉತ್ತಮಗೊಳ್ಳುತ್ತದೆ. ಮೊಟ್ಟೆಯಂತಹ ವಿಟಾಮಿನ್ ಡಿ ಸಮೃದ್ಧ ಆಹಾರ ಅಸ್ತಮಾ ರೋಗಿಗಳಿಗೆ ಒಳ್ಳೆಯದು.

ವಿಟಾಮಿನ್ ಎ ಸಮೃದ್ಧ ಆಹಾರಗಳು

ಅಸ್ತಮಾ ರೋಗಿಗಳಲ್ಲಿ, ವಿಶೇಷವಾಗಿ ಮಕ್ಕಳಲ್ಲಿ ಈ ರೋಗವನ್ನು ನಿಯಂತ್ರಿಸಲು ವಿಟಾಮಿನ್ ಎ ನೆರವಾಗುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ತೋರಿಸಿದೆ. ಅಸ್ತಮಾದಿಂದ ಬಳಲುವ ಮಕ್ಕಳಲ್ಲಿ ವಿಟಾಮಿನ್ ಎ ಕೊರತೆಯಿರುತ್ತದೆ. ವಿಟಾಮಿನ್ ಎ ಕೊರತೆಯು ವಿವಿಧ ಶ್ವಾಸಕೋಶ ಕಾಯಿಲೆಗಳೊಂದಿಗೆ ಗುರುತಿಸಿಕೊಂಡಿದೆ. ಶ್ವಾಸನಾಳಗಳ ಸಹಜ ಬೆಳವಣಿಗೆಗೆ ಮತ್ತ್ತು ಕಾರ್ಯ ನಿರ್ವಹಣೆಯಲ್ಲಿ ವಿಟಾಮಿನ್ ಎ ಪ್ರಮುಖ ಪಾತ್ರ ವಹಿಸುತ್ತದೆ.

ಗಜ್ಜರಿ, ಸಿಹಿಗೆಣಸು, ಬಸಳೆ ಮತ್ತು ಕುಂಬಳಕಾಯಿ ಇತ್ಯಾದಿಗಳು ನೈಸರ್ಗಿಕ ವಿಟಾಮಿನ್ ಎ ಮೂಲಗಳಾಗಿವೆ.

ಮ್ಯಾಗ್ನೀಷಿಯಂ ಸಮೃದ್ಧ ಆಹಾರಗಳು

ಮ್ಯಾಗೀಷಿಯಂ ಕೊರತೆಯಿಂದ ಬಳಲುತ್ತಿರುವ 11ರಿಂದ 19 ವರ್ಷ ವಯೋಮಾನದವರಲ್ಲಿ ಶ್ವಾಸಕೋಶಗಳ ಸಾಮರ್ಥ್ಯ ಕುಂದಿರುತ್ತದೆ ಮತ್ತು ಇದು ಅಸ್ತಮಾ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ಇಂತಹವರು ಶ್ವಾಸಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತಾಗಲು ಬಸಳೆ, ಕುಂಬಳಕಾಯಿ ಬೀಜಗಳು,ಬಾಳೇಹಣ್ಣು,ಡಾರ್ಕ್ ಚಾಕಲೇಟ್ ಇತ್ಯಾದಿ ಮ್ಯಾಗ್ನೀಷಿಯಂ ಸಮೃದ್ದ ಆಹಾರಗಳನ್ನು ಸೇವಿಸುವುದು ಮುಖ್ಯವಾಗುತ್ತದೆ.

ನೆಬುಲೈಝರ್‌ಗಳ ಮೂಲಕ ಮ್ಯಾಗ್ನೀಷಿಯಂ ಅನ್ನು ಉಸಿರಾಡಿದರೆ ಅದು ಅಸ್ತಮಾ ದಾಳಿಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಆದರೆ ಈ ವಿಧಾನವನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News