ಭಾರತದ ಮತ್ತೊಂದು ಚರಿತ್ರೆ

Update: 2018-07-15 05:08 GMT

ಜಗತ್ಪ್ರಸಿದ್ಧ ಇತಿಹಾಸಗಾರ್ತಿ ಅಮೆರಿಕೆಯ ವೆಂಡಿ ಡೊನಿಗರ್‌ರ ಹೆಸರಾಂತ ಸಂಶೋಧನಾ ಕೃತಿಯ ಕನ್ನಡ ಅನುವಾದ ‘‘ಹಿಂದೂಗಳು-ಬೇರೊಂದು ಚರಿತ್ರೆ’’ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಖ್ಯಾತ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮನುಷ್ಯ ನಾಗರಿಕತೆ, ಸಂಸ್ಕೃತಿ, ಭಾಷೆ, ಆಚರಣೆಗಳೆಲ್ಲಾ ರೂಪುತಳೆಯುವ ಬಗೆಯನ್ನು ಅವುಗಳ ಐತಿಹಾಸಿಕ ಬೇರುಗಳನ್ನು ವೆಂಡಿ ವಸ್ತುನಿಷ್ಠವಾಗಿ ಚರ್ಚಿಸುತ್ತಾರೆ. ಕರ್ನಾಟಕದ ವೈಚಾರಿಕ ಜಗತ್ತಿಗೆ ಈ ಕೃತಿ ಹೊಸ ಸೇರ್ಪಡೆಯಾಗಿ ನಮ್ಮ ಚಿಂತನೆ-ಚರ್ಚೆ ಹಾಗೂ ಗ್ರಹಿಕೆ ಗಳ ಮೇಲೆ ಗುಣಾತ್ಮಕ-ಸಕರಾತ್ಮಕ ಪರಿಣಾಮ ಉಂಟು ಮಾಡಲೆಂಬ ಆಶಯದಿಂದ ಕೃತಿಯ ಕೆಲ ಆಯ್ದ ಭಾಗಗಳನ್ನು ಇಲ್ಲಿ ಪ್ರಕಟಿಸಿದೆ.

ಡಿ. ಕೋಸಾಂಬಿ, ಎಚ್.ಡಿ ಸಾಂಕಾಲಿಯಾ, ರೋಮಿಲಾ ಥಾಪರ್, ಆರ್ ಎಸ್ ಶರ್ಮಾ, ಇರ್ಫಾನ್ ಹಬೀಬ್ ಮೊದಲಾದ ಇತಿಹಾಸಕಾರರ ಕೃತಿಗಳ ಅಧ್ಯಯನ ನನ್ನ ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸಿದೆ. ಶಂಬಾ ಜೋಶಿ, ಇರಾವತಿ ಕರ್ವೆ, ವಿ ಕ ರಾಜವಾಡೆ, ರಾ ಚಿಂ ಡೇರೆ, ಗುಂತರ್ ಡಿ. ಸೊಂತೈಮರ್ ಮುಂತಾದ ಸಂಸ್ಕೃತಿ ಅಧ್ಯಯನಕಾರರ ಕೃತಿಗಳಿಂದ ನನ್ನ ಸಂಸ್ಕೃತಿ ಅರಿವು ವಿಸ್ತಾರಗೊಂಡಿದೆ. ಈ ನಡುವೆ ಶಂಕರ ಮೊಕಾಶಿ ಪುಣೇಕರ್ ಅವರ ‘ಮಧ್ಯಯುಗೀನ ಭಾರತ: ಅಂತ್ಯಜರ ತತ್ವ ಚಿಂತನೆ’ ಎನ್ನುವ ಕೃತಿಯನ್ನು ಅನುವಾದಿಸಿದೆ. ಅದೇ ದಾರಿಯಲ್ಲಿ ವೆಂಡಿ ಡೊನಿಗರ್ ಅವರು ಬರೆದ ‘ದ ಹಿಂದೂಸ್: ಆ್ಯನ್ ಆಲ್ಟರ್ನೇಟಿವ್ ಹಿಸ್ಟರಿ’ ಕೃತಿಯನ್ನು ಅನುವಾದಿಸಿದ್ದೇನೆ.

ಹಿಂದೂಮತ ಎನ್ನುವುದು ಸರಳ, ನೇರ ವ್ಯಾಖ್ಯಾನಕ್ಕೆ ಒಳಪಡುವಂತಹದ್ದಲ್ಲ. ಅದನ್ನು ಏಕಮುಖ ದೃಷ್ಟಿಕೋನದಿಂದ ನೋಡುವುದರಿಂದ ಉಪಯೋಗವಿಲ್ಲ. ಅದೊಂದು ಪಾರಂಪರಿಕ ಕಲಾತ್ಮಕ ಹೆಣಿಗೆ. ಏಕಕಾಲದಲ್ಲಿ ಅದರಲ್ಲಿ ಶಿಲಾಯುಗದ ಜನರಿಂದ ಹಿಡಿದು ಈಚಿನ ಮೊಗಲ್ ಸಾಮ್ರಾಟರು ಹಾಗೂ ಬ್ರಿಟಿಷರವರೆಗಿನ ಕಾಲಾವಧಿಗಳ ಹಲವು ಪದರಗಳು ಸೇರಿಕೊಂಡಿವೆ. ಅವುಗಳಲ್ಲಿ ಎಷ್ಟೋ ಅಂಶಗಳು ಈಗಲೂ ಕ್ರಿಯಾವಿಧಿಗಳ, ನಂಬಿಕೆಗಳ, ಆರಾಧನೆ ಮತ್ತು ಆಚರಣೆಗಳ ರೂಪದಲ್ಲಿ ಚಾಲ್ತಿಯಲ್ಲುಳಿದುಕೊಂಡಿವೆ. ಇದಕ್ಕೆ ತಳಹದಿ ಒದಗಿಸಿರುವುದು ಯಾವುದೋ ಒಂದು ತತ್ವದರ್ಶನವಲ್ಲ. ಇದರ ಆಧ್ಯಾತ್ಮಿಕ ಹಾಗೂ ಲೌಕಿಕ ದೃಷ್ಟಿಕೋನಗಳ ಹಿಂದೆ ಪ್ರಾಯೋಗಿಕವಾದ, ಸಾಂಕೇತಿಕವಾದ ಸಾವಿರಾರು ಅಂಶಗಳ ಮೇಳೈಸುವಿಕೆಯಿದೆ. ಹಿಂದೂಮತ ಎನ್ನಲಾಗುವುದು ವಾಸ್ತವವಾಗಿ ಒಂದು ಮತವಾಗಿರದೆ, ಒಂದು ಸಂಕೀರ್ಣ, ವೈಶಿಷ್ಟ್ಯ ಪೂರ್ಣ ಸಂಸ್ಕೃತಿ ಯಾಗಿದೆ. ಇದಕ್ಕೆ ಯಾರೋ ಕೆಲವರು ಮಾತ್ರ ವಾರಸುದಾರರಲ್ಲ. ವಕ್ತಾರರೂ ಅಲ್ಲ. ಇಂತಹದೊಂದು ಸಾಗರಸದೃಶ ಪ್ರಾಚೀನ ಬದುಕಿನ ಕ್ರಮವನ್ನು ಇಷ್ಟು ಮಾತ್ರವೇ ಎಂದು ಹೇಳಿ ಮುಗಿಸುವುದು ಮೂರ್ಖತನ.

ಇದು ಹೌದು-ಅಲ್ಲ; ಹೌದು-ಅಲ್ಲ ಎರಡೂ; ಹೌದು-ಅಲ್ಲ ಎರಡೂ ಅಲ್ಲ ಹಾಗೂ ಅದ್ಯಾವುದೂ ಅಲ್ಲ. ಹೀಗೆ ಅನೇಕಾಂತಗಳು, ಕೋನಗಳು, ಸಮೃದ್ಧ ತತ್ವದರ್ಶನಗಳು, ಸ್ಮತಿ ಗಳು, ಕಥನಗಳು ಒಂದರೊಳಗೊಂದು ಬೆರೆತು ಇತಿಹಾಸವಾಗಿದೆ. ಐತಿಹ್ಯವೂ ಆಗಿದೆ. ಇತಿಹಾಸ ಮಾತ್ರ ಖಚಿತ, ಐತಿಹ್ಯ ಕೇವಲ ಕಲ್ಪನಾತ್ಮಕ ಎನ್ನಲೂ ಬರದ ಹಾಗೆ ಎಷ್ಟೋ ಆಯಾಮಗಳಲ್ಲಿ ಇವು ಮುಪ್ಪುರಿಗೊಂಡಿವೆ. ಇದೆಲ್ಲವನ್ನೂ ತೆರೆದ ಕಣ್ಣಿಂದ, ಮುಕ್ತ ಮನಸ್ಸಿನಿಂದ ದರ್ಶಿಸುವುದು ಒಂದು ಸಾಕ್ಷಾತ್ಕಾರಕ್ಕೆ ಸಮಾನದ ಕ್ರಿಯೆ. ಬಹುಶಃ ಅದು ಅದರ ರೂಪಕಾರ್ಥದಲ್ಲಿ ವಿಶ್ವರೂಪ ದರ್ಶನ.

ಪ್ರಾಕೃತ-ಸಂಸ್ಕೃತ

ಆ ಕಾಲದಲ್ಲಿ ಪ್ರಾಕೃತ ಭಾಷೆ ಸಹಜವಾದ ರೀತಿಯಲ್ಲಿ ಮೊದಲು ಹುಟ್ಟಿ ಶಿಷ್ಟರು ಉಪಯೋಗಿಸುವ ಸಂಸ್ಕೃತ ಆನಂತರದಲ್ಲಿ ರೂಪುಗೊಂಡಿರಬೇಕು. ಆದರೆ ದಕ್ಷಿಣ ಏಶ್ಯಾ ವಿದ್ವಾಂಸರು ಸಾಧಾರಣವಾಗಿ ಸಂಸ್ಕೃತವೇ ಮೊದಲ ಭಾಷೆಯೆಂದು, ಇತರ ಭಾಷೆಗಳು ಅದರಿಂದ ಆವಿರ್ಭವಿಸಿದವು ಎಂದು ಭಾವಿಸುತ್ತಾರೆ. ಮೊದಲಿಗೆ ಲಿಖಿತ ಲಿಪಿಯನ್ನು ಪಡೆದುಕೊಂಡದ್ದು, ಪ್ರಾಚೀನ ಲಿಖಿತ ಪತ್ರ ಭಂಡಾರಗಳಿಗೆ ಸೇರಿಕೊಂಡದ್ದು, ಸಂರಕ್ಷಿತಗೊಂಡದ್ದು ಸಂಸ್ಕೃತವಾದುದರಿಂದ, ಇತರ ಭಾಷೆಗಳ ವಿಷಯದಲ್ಲಿ ಆ ಕೆಲಸ ನಂತರದಲ್ಲಿ ನಡೆದದ್ದು ಈ ನಂಬಿಕೆಗೆ ಕಾರಣವಾಗಿರಬಹುದು. ಈ ಪರಿಸ್ಥಿತಿಯಿಂದಾಗಿಯೇ ಸಂಸ್ಕೃತವನ್ನು ಅತೀ ಪ್ರಾಚೀನ ಭಾಷೆ ಎಂದು ಕರೆಯುತ್ತಿ ದ್ದೇವೆ ನಾವು. ಆದರೆ ಅಧಿಕಾರಸ್ಥರ ಭಾಷೆಯಾಗಿದ್ದ ಸಂಸ್ಕೃತ ಒಂದು ಸಣ್ಣ ವರ್ಗದಿಂದ ರೂಪುಗೊಂಡು ಚಾಲ್ತಿಗೆ ಬಂದಿತು. ಅದು ಹೆಚ್ಚಿನ ಜನಕ್ಕೆ ಅರ್ಥವಾಗದಿದ್ದುದೇ ಆರಂಭಿಕ ಹಂತದಲ್ಲಿ ಆ ಭಾಷೆಗೆ ಒಂದು ಶಕ್ತಿಯಾಗಿ ಒದಗಿತು. ಆ ಶಕ್ತಿ ಶಿಷ್ಟ ವರ್ಗಕ್ಕೂ ಕೂಡ ಒಂದು ಶಕ್ತಿಯಾಗಿ ಮಾರ್ಪಟ್ಟಿತು.

ಉಪನಿಷತ್ತುಗಳು ಮತ್ತು ಗ್ರೀಕರ ಪ್ರಭಾವ!

ಕೆಲವು ಉಪನಿಷತ್ತುಗಳಲ್ಲಿ ಬ್ರಾಹ್ಮಣಗಳನ್ನು ಉದಾಹರಿಸಿರುವುದರಿಂದ ಉಪನಿಷತ್ತುಗಳೆಲ್ಲವೂ ಬ್ರಾಹ್ಮಣಗಳಿಂದ ಉದ್ಭವಿಸಿದವುಗಳು ಎಂದು ಭಾಷಾಶಾಸ್ತ್ರಜ್ಞರು ಭಾವಿಸುತ್ತಾರೆ. ಆದರೆ ಬ್ರಾಹ್ಮಣಗಳ ಆ ನಂತರದ ಕಾಲದಲ್ಲಿ ಉಪನಿಷತ್ತುಗಳ ರಚನೆ ನಡೆದಿರುವುದರಿಂದಾಗಿ, ಆಗಿನ ಹೊಸ ಪರಿಸ್ಥಿತಿಗಳ ಪ್ರಭಾವ ಉಪನಿಷತ್ತುಗಳ ಮೇಲೆ ಕನಿಷ್ಠ ಪಕ್ಷ ಆಂಶಿಕವಾಗಿಯಾದರೂ ಯಾವ ಮಟ್ಟಿಗೆ ಇದೆ ಎನ್ನುವ ಪ್ರಶ್ನೆಯನ್ನು ಚರಿತ್ರಾಕಾರರು ಕೇಳಬೇಕು. ಅಂತಹದೇನೂ ಇಲ್ಲವೆಂದಾದಲ್ಲಿ ಉಪನಿಷತ್ತುಗಳನ್ನು ರಚಿಸಬೇಕಾದ ಅಗತ್ಯವೇನಿತ್ತು? ಉಪನಿಷತ್ತುಗಳಲ್ಲಿ ಕಂಡುಬರುವ ಬ್ರಾಹ್ಮಣಗಳಲ್ಲಿ ಇಲ್ಲದ ವಿಷಯಗಳ ಮಾತೇನು? ಅವು ಗ್ರೀಕರಿಂದ ಬಂದಿರುತ್ತವೆಂದೂ, ಪ್ಲೇಟೋನನ್ನು ನೆನಪಿಗೆ ತರುತ್ತವೆಂದೂ, ಕ್ರಿ.ಪೂ. 6ನೇ ಶತಮಾನದ ಹೊತ್ತಿನ ಐರೋಪ್ಯ ಆಕ್ಸಿಯಾಲ್ ಯುಗ ಪ್ರಭಾವ ಕಾರಣವಿರಬಹುದೆಂದೂ, ಸಿಂಧೂ ನಾಗರಿಕತೆಯ ಪ್ರಭಾವದ ವಿಷಯವೇನೆಂದೂ ಹಲವು ಊಹಾಪೋಹಗಳು ನಮಗೆ ಕೇಳಿಸುತ್ತಿರುತ್ತವೆ. ಆದರೆ ಈ ಪ್ರಭಾವಗಳ ಕುರಿತು ಹೌದು ಎನ್ನುವುದಕ್ಕಾಗಲೀ, ಅಲ್ಲ ಎನ್ನುವುದಕ್ಕಾಗಲೀ ನನಗೆ ಖಚಿತವಾದ ಮಾಹಿತಿ ಇಲ್ಲದಿರುವುದರಿಂದ, ಆಧಾರಗಳಿಗಾಗಿ ಗ್ರೀಸ್‌ನ ಕಡೆಗೆ ನೋಡುವುದಕ್ಕೆ ಮೊದಲು, ಉಪನಿಷತ್ತುಗಳ ಕಾಲದಲ್ಲಿ ಭಾರತ ದೇಶದೊಳಗಿನ ಅಂತರ್ಗತ ಪರಿಸ್ಥಿತಿಗಳೇನಾಗಿದ್ದವು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಹೊಸ ರಾಜಕೀಯ ವ್ಯವಸ್ಥೆ, ತೆರಿಗೆ ವಿಧಿಸುವಿಕೆ, ದೈನಂದಿನ ಜೀವನದಲ್ಲಿ ಬಂದ ಬದಲಾವಣೆಗಳು ಏನೆಂಬುದನ್ನು ಪರಿಶೀಲಿಸಬೇಕು.

ಚಕ್ರವರ್ತಿ ಅಶೋಕ - ಅಕ್ಬರ್‌ರ ಹೊಸ ಯೋಜನೆಗಳು ಮತ್ತು ನಿರಾಶ್ರಿತ ರೈಕ್ವಾ

ಭಾಷಾಶಾಸ್ತ್ರ, ಚರಿತ್ರೆ ಎನ್ನುವ ಎರಡಕ್ಕೂ ನಾವು ವ್ಯಕ್ತಿತ್ವ ಎನ್ನುವ ಮೂರನೇ ಅಂಶವನ್ನೂ ಕೂಡ ಜೋಡಿಸಬೇಕಾಗಿರುತ್ತದೆ. ಯಾವುದು ಅಸಲಿ ಎನ್ನುವುದನ್ನು ಬಗೆಹರಿಸುವುದು ಯಾವಾಗಲೂ ಕಗ್ಗಂಟಾದ ಪ್ರಶ್ನೆ. ವ್ಯಕ್ತಿಗತ ಪ್ರತಿಭೆಯನ್ನು ಅಳೆಯಲು ಸಾಧ್ಯವಾಗದಿರುವುದು ಅದಕ್ಕೊಂದು ಕಾರಣ. ಆಲೋಚನೆಗಳು ಶೂನ್ಯದಿಂದ ಉದ್ಭವಿಸುವುದಿಲ್ಲ. ಅದೇ ವಿಧದಲ್ಲಿ ಅವುಗಳನ್ನು ಅದಕ್ಕೆ ಹಿಂದೆಯೇ ಇದ್ದ ಆಲೋಚನೆಗಳಿರುತ್ತವೆ. ಅವು ಒಂದೊಂದು ಸಲ ಅದೇ ಸಮಯದಲ್ಲಿ, ಅದೇ ಸ್ಥಳದಲ್ಲಿ ವಾಸಿಸುವವರ ಆಲೋಚನೆಗಳಿಗೆ ಭಿನ್ನವಾಗಿ ಇರುತ್ತವೆ. ತಳಸ್ತರ ವರ್ಗಗಳವರಿಗೆ, ಉಪೇಕ್ಷೆಗೆ ಗುರಿಯಾದ ಇತರರಿಗೆ ಇರುವ ಆಲೋಚನೆಗಳು ಏನು ಎಂದು ಅನ್ವೇಷಿಸುವ ಮೊದಲು ನಾವು ಈ ಮಾತನ್ನು ಗುರುತಿಸಿಕೊಳ್ಳಬೇಕು. ಅವರು ಒಂದೊಂದು ಸಲ ಒಂದು ವೃಂದವಾಗಿರುವುದಕ್ಕಿಂತ ವ್ಯಕ್ತಿಗಳಾಗಿ ಹೆಚ್ಚಿನದನ್ನು ಸಾಧಿಸುತ್ತಾರೆ. ವ್ಯಕ್ತಿಗಳನ್ನು ಸಮಕಾಲೀನ ಆಲೋಚನೆಗಳಿಂದ ಮಾತ್ರವೇ ಉದ್ಭವಿಸಿದವರೆಂದು, ಎನ್ನಲಾರೆವು. ಶೇಕ್ಸ್ ಪಿಯರ್ ಕೇವಲ ಎಲಿಝಬೆತ್ ಯುಗದ ಸಾಹಿತಿಯಲ್ಲ. ಭಾರತ ದೇಶದ ಚರಿತ್ರೆಯಲ್ಲಿ ಕೆಲವು ವ್ಯಕ್ತಿಗಳು ತಮ್ಮ ಸಮಕಾಲೀನ ಭಾವಧೋರಣೆ ಗಳಿಗೆ ಭಿನ್ನವಾಗಿ, ಸಹನಶೀಲತೆಯನ್ನು ಇಲ್ಲವೇ ಹಿಂಸೆಯನ್ನು, ಆ ಕಡೆ ಅಥವಾ ಈ ಕಡೆ ತಿರುವು ತಿರುಗಿಸಿದ ಸಂದರ್ಭಗಳಿವೆ. ಉದಾಹರಣೆಗೆ ಅಶೋಕ, ಅಕ್ಬರ್ ಚಕ್ರವರ್ತಿಗಳು ತಮ್ಮ ಕಾಲವು ಧರ್ಮ ಹಿಂಸೆಯದ್ದಾಗಿದ್ದಾಗಲೂ ಮತ ಸಹಿಷ್ಣುತೆಗೆ ಅನುಕೂಲಕರವಾಗಿ ಹೊಚ್ಚಹೊಸ ಕಾರ್ಯಕ್ರಮಗಳನ್ನು ಆರಂಭಿಸಿದರು. ಭಿನ್ನವಾದ, ವ್ಯಕ್ತಿಗತವಾದ ಅಸಲಿ ಆಲೋಚನೆಗಳನ್ನು ಹೊಂದಿದವರೇ ಋಗ್ವೇದದೊಳಗಿನ ‘ನಸದೀಯ’ (ಆಗ ಏನೂ ಇರಲಿಲ್ಲ) ಮಂತ್ರವನ್ನು, ಜೈಮಿನೀಯ ಬ್ರಾಹ್ಮಣದೊಳಗಿನ ದೀರ್ಘಜಿಹ್ವಾ ಎಂಬ ವ್ಯಭಿಚಾರಿಣಿಯ ಕಥೆಯನ್ನು, ಉಪನಿಷತ್ತುಗಳೊಳಗಿನ ರೈಕ್ವಾ ಕಥೆಯನ್ನು ರಚಿಸಿದರು. ಗಾಡಿಗಳ ಕೆಳಗೆ ವಾಸಿಸುತ್ತಿದ್ದ ರೈಕ್ವಾನಂತಹವನು ಇಡೀ ಪ್ರಪಂಚ ಸಾಹಿತ್ಯ ಚರಿತ್ರೆಯೊಳಗೆ ಕಂಡುಬರುವ ಮೊದಮೊದಲ ನಿರಾಶ್ರಿತ ಜೀವಿಗಳಲ್ಲಿ ಒಬ್ಬ ಪ್ರಾಚೀನ ಕಾಲದಲ್ಲಿ ಇಂತಹ ಸೃಜನಶೀಲ ಸಾಹಿತ್ಯವನ್ನು ಸೃಷ್ಟಿಸಿದವರು ಕೇವಲ ಸಂಸ್ಕೃತದಲ್ಲಿ ಮಾತ್ರ ಬರೆದಿಲ್ಲ. ಅದು ಮೌಖಿಕ ಸಾಹಿತ್ಯದಲ್ಲಿ, ಒಂದೊಂದು ಸಲ ಸ್ತ್ರೀಯರು, ತಳಸ್ತರದ ಜನರ ಕಥನಗಳಲ್ಲಿ, ಸಂಸ್ಕೃತ ಸಾಹಿತ್ಯದಲ್ಲಿ ಕಂಡುಬರುವ ಸ್ಥಳೀಯ ಸಂಪ್ರದಾಯಗಳಲ್ಲಿ ಕೂಡ ಇರುತ್ತದೆ. ಲಿಖಿತ ಸಂಪ್ರದಾಯ ಇರುವವರಲ್ಲಿ, ಇಲ್ಲದವರಲ್ಲಿ ಕೂಡ ಅಸಲಿಯಾದ ಆಲೋಚನೆಗಳು ಅಪರೂಪವಾದವುಗಳೇ. ಸಮಕಾಲೀನ ಧೋರಣೆಗಳಿಗೆ ಭಿನ್ನವಾದ ನಿಲುವು ತೆಗೆದುಕೊಂಡ ಪ್ರಮುಖರ ವಿಷಯಕ್ಕೆ ಬಂದರೆ ಅಶೋಕ, ಅಕ್ಬರ್, ಗಾಂಧಿಯಂತಹವರು ಒಂದು ಕಡೆ, ಔರಂಗಜೇಬ, ಬ್ರಿಗೇಡಿಯರ್ ಜನರಲ್, ರೆಜಿನಾಲ್ಡ್ ಡೈಯರ್, ಎಂ.ಎಸ್. ಗೋಳ್ವಾಲ್ಕರ್ ಮತ್ತಿತರರು ಮತ್ತೊಂದು ಕಡೆ ಹಿಂದೂ ಮತದೊಳಗೆ ಗಣನೀಯವಾದ ಬದಲಾವಣೆಗಳನ್ನು ಉಂಟುಮಾಡಿದರು.

ಲಿಖಿತ ಹಾಗೂ ಮೌಖಿಕ ಪರಂಪರೆ

ಉನ್ನತ ವರ್ಗಗಳವರ ಲಿಖಿತ ಸಂಪ್ರದಾಯಗಳಿಗೆ ಭಾರತ ದೇಶದ ವಾತಾವರಣ ಒಂದು ಅಡಚಣೆಯಾಗಿ ಪರಿಣಮಿಸಿತು. ತೇವದಿಂದ ಕೂಡಿದ ಉಷ್ಣೋಗ್ರತೆ, ಚಳಿಯ ಕಾರಣದಿಂದ ಲಿಖಿತ ಪ್ರತಿಗಳು ಒಂದೆರಡು ಶತಮಾನಗಳಲ್ಲೇ ಹಾಳಾಗುತ್ತಿದ್ದವು. ಪ್ರಾಣಿ ಚರ್ಮಗಳಿಂದ ಮಾಡಿದ ಬರವಣಿಗೆಯ ಸಾಮಗ್ರಿಗಳ ಮೇಲೆ ಮತಾಧಾರಿತ ನಿಷೇಧ ಇತ್ತಾದ್ದರಿಂದ, ತಾಳೆ ಗರಿಗಳಿಗೆ ತಾಳಿಕೆ, ಉಳಿಕೆ ಕಡಿಮೆಯಾದುದರಿಂದ ಆ ಪಠ್ಯಗಳನ್ನು ಮತ್ತೆಮತ್ತೆ ಹೊಸದಾಗಿ ಪ್ರತಿ ಮಾಡಬೇಕಾಗಿ ಬರುತ್ತಿತ್ತು. ಶ್ರೀಮಂತರಾದವರು ಮಾತ್ರ ಹಾಗೆ ಬರೆಸಬಲ್ಲವರಾಗಿದ್ದರು. ಬರೆಯುವವನು ಅಗ್ರ ವರ್ಣಕ್ಕೆ ಸೇರಿದ ಪುರುಷನಾಗಿರುತ್ತಿದ್ದ.

ಭಾರತ ದೇಶದ ಚರಿತ್ರೆಯುದ್ದಕ್ಕೂ ಮೌಖಿಕ-ಲಿಖಿತ ಸಂಪ್ರದಾಯಗಳ ನಡುವೆ ಪರಸ್ಪರ ಸಂಬಂಧಗಳು ಕಾಣಿಸುತ್ತವೆ. ಲಿಖಿತ ಕಾವ್ಯಗಳನ್ನು ಮೌಖಿಕವಾಗಿ ಕಥಿಸಿ ವ್ಯಕ್ತಿಗೊಳಿಸುವುದು, ಮೌಖಿಕ ಗಾಥೆಗಳಿಗೆ ಲಿಖಿತ ರೂಪ ಕೊಡುವುದು ಎರಡೂ ನಡೆಯುತ್ತಿದ್ದವು. ಮೌಖಿಕ ಗಾಥೆಗಳನ್ನು ಹೇಳುವವರೆಲ್ಲರೂ ಅನಕ್ಷರಸ್ಥರೆಂದು ಹೇಳಲಾಗದು. ಅವರೊಳಗೆ ಅಕ್ಷರಸ್ಥರೂ ಕೂಡ ಇರುತ್ತಿದ್ದರು. ಲಿಖಿತ-ಮೌಖಿಕ ಸಂಪ್ರದಾಯಗಳಿಗೆ ನಡುವೆ ಇದ್ದ ಸಂಬಂಧಗಳಿಗೆ ವೇದಗಳು, ಮಹಾಭಾರತ ಪ್ರಮುಖ ಉದಾಹರಣೆಗಳು. ಋಗ್ವೇದ ನೂರಾರು ವರ್ಷಗಳವರೆಗೆ ಮೌಖಿಕ ಸಂಪ್ರದಾಯ ವಾಗಿಯೇ ಉಳಿದುಕೊಂಡಿತ್ತು. ಅಸಾಂಪ್ರದಾಯಿಕರು ಅದರೊಳಗಿನ ಪ್ರತಿ ಶಬ್ದವನ್ನೂ ಕಂಠಪಾಠ ಮಾಡಿಕೊಳ್ಳುತ್ತಿದ್ದರು. ಅದರ ಪಠಣದ ರೀತಿಯಲ್ಲೂ ಯಾವುದೇ ಬಗೆಯ ವ್ಯತ್ಯಾಸ ಇರುತ್ತಿರಲಿಲ್ಲ. ಪಠ್ಯವು ಬದಲಾಗುತ್ತಿರಲಿಲ್ಲ. ಇದಕ್ಕೆ ಭಿನ್ನವಾಗಿ ಬದಲಾವಣೆ ಗಳು ಇಲ್ಲದೇ ಸ್ಥಿರ ರೂಪದಲ್ಲಿ ಇರಬಲ್ಲದೆಂದು ಭಾವಿಸುವ ಮಹಾಭಾರತ ಲಿಖಿತ ಕಾವ್ಯ ಆಗಿಯೂ ಕೂಡ ಪದೇಪದೇ ಬದಲಾವಣೆಗಳಿಗೆ ಒಳಪಟ್ಟಿತು. ಈ ದಿನಮಾನದಲ್ಲಿ ನೂರಾರು ಮಹಾಭಾರತಗಳಿವೆ. ಲಿಖಿತವಾಗಿ, ಮೌಖಿಕ ರೂಪದಲ್ಲಿ ಲೆಕ್ಕವಿಲ್ಲದಷ್ಟಿವೆ. ಇದು ಸ್ವಲ್ಪ ಸಂಕೀರ್ಣತೆಯನ್ನು ಸೃಷ್ಟಿಸುತ್ತದೆ ಎಂದುಕೊಂಡರೆ ಸಂಸ್ಕೃತಕ್ಕೆ, ಇತರ ಭಾರತೀಯ ಭಾಷೆಗಳಿಗೆ ಮಧ್ಯೆ ಇರುವ ಸಂಬಂಧಗಳು ಈ ಸಂಕೀರ್ಣತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಉತ್ತರ ಭಾರತದೊಳಗಿನ ಅತ್ಯಧಿಕ ಭಾಷೆಗಳಿಗೆ ಅವುಗಳ ವ್ಯಾಕರಣಕ್ಕೆ ಒಂದು ಹಂತದವರೆಗಿನ ಪದಜಾಲಕ್ಕೂ ಸಹ ಸಂಸ್ಕೃತ ಒಂದು ಮಾದರಿ ಯಾಗಿ ಇದೆ. ತೆಲುಗು, ಕನ್ನಡ, ಮಲಯಾಳದಂತಹ ದಕ್ಷಿಣಾದಿ ದ್ರಾವಿಡ ಭಾಷೆಗಳಿಗೆ ತಮಿಳು ಕೂಡ ಅದೇ ತೆರನಾದುದು. ಈ ವಿಧದಲ್ಲಿ ಉತ್ತರದಲ್ಲಿ ಸಂಸ್ಕೃತ, ದಕ್ಷಿಣದಲ್ಲಿ ತಮಿಳು ಪ್ರಧಾನವೆಂಬ ವ್ಯತ್ಯಾಸ ಇದ್ದಾಗಲೂ ಕೂಡ ಅಷ್ಟು ಮಾತ್ರಕ್ಕೆ ಸಂಸ್ಕೃತವನ್ನು ಉತ್ತರ ಪ್ರಾಂತದೊಂದಿಗೆ, ತಮಿಳನ್ನು ದಕ್ಷಿಣ ಪ್ರಾಂತದೊಂದಿಗೆ ಸಮಾನಗೊಳಿಸಿ ಮಾತನಾಡಲಾಗದು. ಉದಾಹರಣೆಗೆ ದಕ್ಷಿಣ ದೇಶದ ಭಕ್ತಿ ಸಂಪ್ರದಾಯ ಸಂಸ್ಕೃತದೊಳಕ್ಕೂ ಪ್ರವೇಶಿಸಿತು. ಎರಡೂ ಭೂಭಾಗಗಳ ಸಂಪ್ರದಾಯಗಳು, ಸಾಹಿತ್ಯಗಳು ಈ ಕಡೆ ಆ ಕಡೆ ಪ್ರಯಾಣಿಸಿ ಪರಸ್ಪರ ಪ್ರಭಾವ ಬೀರಿಕೊಂಡವು. ಕುದುರೆ-ನಾಯಿ-ಗೋವುಗಳ ಪಾತ್ರ

ಮನುಷ್ಯರ ಭೌತಿಕ ಸಂಸ್ಕೃತಿಯಲ್ಲಿ ಯಾವ ಪ್ರಾಣಿಗಳು, ಯಾವ ಕಾಲದಲ್ಲಿ, ಯಾವ ಪ್ರಾಂತದಲ್ಲಿ ಕಾಣಿಸಿಕೊಂಡವೋ ನಮಗೆ ತಿಳಿದುಬಂದದ್ದಾದರೆ ಆಯಾ ಸಂಸ್ಕೃತಿಗಳ ಭೌಗೋಳಿಕತೆ ಕುರಿತು ಅವು ಯಾವ ಕಾಲದಲ್ಲಿ ಅಸ್ತಿತ್ವದಲ್ಲಿದ್ದವು ಎನ್ನುವ ವಿಷಯವಾಗಿ ನಾವು ಒಂದೊಂದು ಸಲ ಅಂದಾಜು ಮಾಡಬಲ್ಲೆವು. ಒಟ್ಟಿನಲ್ಲಿ ಪ್ರಾಣಿಗಳು ನಮಗೆ ಕಾವ್ಯಗಳಲ್ಲಿ ಹಿಂಸೆಯನ್ನು ನಿಯಂತ್ರಿಸುವ ಪಾತ್ರಧಾರಿಗಳಾಗಿ, ಬೇರೆಬೇರೆ ಸಾಮಾಜಿಕ ವರ್ಗಗಳಿಗೆ ಚಿಹ್ನೆಗಳಾಗಿ ಕಂಡುಬರುತ್ತವೆ. ಸಜೀವ ಪ್ರಾಣಿಗಳಿಗೂ, ಮನುಷ್ಯರ ಸ್ವಭಾವ ರೂಪದಲ್ಲಿ ಇರುವ ಪ್ರಾಣಿಗಳಿಗೂ ನಡುವೆ ಸನ್ನಿಹಿತ ಸಂಬಂಧ ಇರುವ ಹಾಗೆ ಇದರ ಆಧಾರದಲ್ಲಿ ನಮಗೆ ಅರ್ಥವಾಗುತ್ತದೆ. ಹಿಂದೂಮತವನ್ನು ಅರ್ಥಮಾಡಿಕೊಳ್ಳುವುದಕ್ಕೆ ಈ ಎರಡನ್ನೂ ಕೂಡ ನಾವು ಅವಗಾಹನೆಗೆ ತಂದುಕೊಳ್ಳಬೇಕು. ಹಿಂದೂ ಮತದಲ್ಲಿ ಮುಖ್ಯವಾಗಿ ಕುದುರೆ, ನಾಯಿ, ಗೋವುಗಳ ಪಾತ್ರ ಆಸಕ್ತಿದಾಯಕವಾಗಿ ಇರುತ್ತದೆ. ಪುರಾಣಗಳು, ಕಾವ್ಯಗಳು ಕುದುರೆಗಳನ್ನು ಶಕ್ತಿಗೆ, ಕ್ಷತ್ರಿಯರಿಗೆ, ಮುಖ್ಯವಾಗಿ ವಿದೇಶೀ ಆಳ್ವಿಕೆದಾರರಿಗೆ ಚಿಹ್ನೆಯನ್ನಾಗಿ ಪರಿಗಣಿಸುತ್ತವೆ. ಅದೇ ವಿಧವಾಗಿ ನಾಯಿಗಳನ್ನು ಅಪವಿತ್ರತೆಗೂ, ತಳ ಜಾತಿಗಳವರಿಗೂ, ಗೋವುಗಳನ್ನು ಪಾವಿತ್ರತೆಗೂ, ಬ್ರಾಹ್ಮಣರಿಗೂ ಚಿಹ್ನೆಯಾಗಿ ಚಿತ್ರಣಗೊಳಿಸಿವೆ. ಕುದುರೆ ಭಾರತಕ್ಕೆ ಸೇರಿದ ಪ್ರಾಣಿ ಆಗಿಲ್ಲದಿರುವುದು ಮಾತ್ರವಲ್ಲದೆ, ಇಲ್ಲಿ ಸುಪುಷ್ಟವಾಗಿ ಬೆಳೆಯಲಾರದು. ಆದ್ದರಿಂದ ಕುದುರೆಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳಬೇಕು. ಸಾಧಾರಣ ವಾಗಿ ಪಶ್ಚಿಮ ಏಶ್ಯಾ, ಮಧ್ಯ ಏಶ್ಯಾ ಪ್ರಾಂತಗಳಿಂದ. ಅದಕ್ಕೆ ಕಾರಣ ವಾತಾವರಣ, ಸೂಕ್ತವಾದ ಮೇವು. ಆ ಕಾರಣಗಳು ಇಂದಿಗೂ ಉಳಿದುಕೊಂಡಿವೆ. ಇಲ್ಲಿನ ಭೂಮಿ ಮಳೆಗಾಲದಲ್ಲಿ ತೇವಾಂಶಭರಿತವಾಗಿಯೂ, ಬೇಸಗೆಯಲ್ಲಿ ಒಣಗಿಕೊಂಡು ಬಿರಿದುಕೊಳ್ಳುತ್ತದೆ. ಮೇವಿಗೆ ಸೂಕ್ತವಾದ ಹುಲ್ಲು ಲಭಿಸುವ ಕಾಲ ಸೆಪ್ಟಂಬರ್‌ನಿಂದ ಮೇ ವರೆಗೆ ಇದೆ. ಆ ಕಾಲದಲ್ಲೂ ಕೂಡ ಶ್ರೇಷ್ಠವಾದುದು, ಅತ್ಯಂತ ಸೂಕ್ತವಾದುದು ಸಾಕಷ್ಟು ಲಭಿಸುವುದಿಲ್ಲ.

ಗೊಂಡ್ವಾನ ಲ್ಯಾಂಡ್, ಲೆಮೂರಿಯಾ

ಆಫ್ರಿಕಾ ನ್ಯೂ ವರ್ಲ್ಡ್‌ನ ಭೂಪಟಗಳು 1620ರಲ್ಲಿ ಕೈಗೆಟಕುವಂತಾದಾಗ ಪಶ್ಚಿಮಾಫ್ರಿಕಾ ಸಮುದ್ರ ತೀರ ದಕ್ಷಿಣ ಅಮೆರಿಕ ಪೂರ್ವ ತೀರ ಒಂದಕ್ಕೊಂದು ಅಂಟಿಸಿದಂತೆ ಸರಿಹೋಗುತ್ತವೆಂದು ಮೊದಲು ಗುರ್ತಿಸಿದವನು ಫ್ರಾನ್ಸಿಸ್ ಬೇಕನ್. 19ನೇ ಶತಮಾನದ ಶಾಸ್ತ್ರಜ್ಞರು ಅಂಟಾರ್ಕಟಿಕಾ, ಆಸ್ಟ್ರೇಲಿಯಾ, ಆಫ್ರಿಕಾ, ಮಡಗಾಸ್ಕರ್, ದಕ್ಷಿಣ ಅಮೆರಿಕ, ಅರೇಬಿಯಾ, ಭಾರತ ಭೂಭಾಗಗಳು ಒಂದು ಕಾಲದಲ್ಲಿ ಒಂದೇ ದೊಡ್ಡ ಭೂ ಖಂಡವಾಗಿ ಕೂಡಿಕೊಂಡಿದ್ದವೆಂದು ಊಹಿಸಿದರು. ಆ ಭೂ ಖಂಡಕ್ಕೆ ಆಸ್ಟ್ರಿಯಾಕ್ಕೆ ಸೇರಿದ ಭೂಗೋಳ ತಜ್ಞರೊಬ್ಬರು ಗೊಂಡ್ವಾನ ಅಥವಾ ಗೊಂಡ್ವಾನಾ ಲ್ಯಾಂಡ್ ಎಂದು ಹೆಸರಿಟ್ಟರು. ಮಧ್ಯ ಭಾರತದೊಳಗಿನ ಗೊಂಡ್ವಾನಾ ಪ್ರಾಂತದಿಂದ ಈ ಹೆಸರು ಬಂದಿತು. ಆ ಮಾತಿಗೆ ಅರ್ಥ ಗೊಂಡರ ಅಡವಿ. ಗೊಂಡ ಗಿರಿ ಜನರು ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶದೊಳಗಿನ ಕೆಲವು ಭಾಗಗಳಲ್ಲಿ ನಿರ್ವಸಿಸುತ್ತಾರೆ. ಆಂಧ್ರಪ್ರದೇಶದೊಳಗಿನ ಭಾರೀ ಶಿಲಾಬೆಟ್ಟಗಳು (ಈಗ ತೆಲಂಗಾಣ) ಸುಪ್ರಸಿದ್ಧವಾದವುಗಳು. ಅವು ಭೂ ಗ್ರಹದ ಮೇಲಿನ ಮಿಕ್ಕೆಲ್ಲವುಗಳಿಗಿಂತ ಪ್ರಾಚೀನವಾದವುಗಳು. ವಿಜ್ಞಾನಿಗಳ ಅಂದಾಜಿನ ಪ್ರಕಾರ ಭೂ ಫಲಕಗಳ ಚಲನೆ ಸುಮಾರು 16 ಕೋಟಿ 70 ಲಕ್ಷ ವರ್ಷಗಳ ಹಿಂದೆ ಆರಂಭಗೊಂಡು ಗೊಂಡ್ವಾನಾ ಪೂರ್ವ ಭಾಗ ಆಫ್ರಿಕಾದಿಂದ ಬೇರ್ಪಟ್ಟು ಸುಮಾರು 12 ಕೋಟಿ ವರ್ಷಗಳ ಹಿಂದೆ ಉತ್ತರದ ಕಡೆಗೆ ಚಲಿಸಿತು. ಅದು ಮತ್ತೆ ಎರಡು ತುಣುಕುಗಳಾದಾಗ ಅವುಗಳಲ್ಲಿ ಒಂದು ಮಡಗಾಸ್ಕರ್, ಎರಡನೆಯದು ದಖ್ಖನ್ ಪ್ರಸ್ಥಭೂಮಿ ಆದವು. ದಖ್ಖನ್ ಪ್ರಸ್ಥಭೂಮಿ ಮಧ್ಯ ಏಶ್ಯಾವನ್ನು ಸೇರಿಕೊಂಡಿತು. ಆಸ್ಟ್ರೇಲಿಯಾದ ಇಂಡಾಲಜಿಸ್ಟರು ವಾಸ್ತವವಾಗಿ ದಖನ್ ತಮ್ಮ ದೇಶದೊಳಗಿನ ಭಾಗವೆಂದು ಹಾಸ್ಯಪೂರಿತವಾಗಿ ಹೇಳುತ್ತಿರುತ್ತಾರೆ.

ಏಕಲವ್ಯನ ಪ್ರಸಂಗ

ಸಿಂಧೂ ನಾಗರಿಕತೆ, ವೇದಗಳು ಆ ಎರಡೂ ಪ್ರಜೆಗಳ ಜಂಟಿ ಸೃಷ್ಟಿ ಆಗಬಲ್ಲ ಅವಕಾಶವಿಲ್ಲ. ಆದರೆ ಆ ನಂತರ ಕಾಲದ ಹಿಂದೂಮತ ಅವರ ಜಂಟಿ ಸೃಷ್ಟಿ ಆಗಿರುತ್ತದೆ. ಆ ಮತದಲ್ಲಿ ಅವರಿಬ್ಬರ ಭಾಷೆಗಳು, ಸಂಸ್ಕೃತಿಗಳು, ವೇದಪದ ಸಮುದಾಯ, ಸಿಂಧೂ ಚಿತ್ರಗಳು ಇವುಗಳೊಂದಿಗೆ ಇತರ ಸಂಸ್ಕೃತಿಗಳಿಗೆ ಸೇರಿದ ಅಂಶಗಳು ಆನಂತರ ಕಾಲದ ಹಿಂದೂ ಮತದಲ್ಲಿ ಕಾಣಿಸುತ್ತವೆ. ಕೆಲವು ಪ್ರಾಂತಗಳಲ್ಲಿ ಇವು ಅವುಗಳಷ್ಟಕ್ಕವು ಪ್ರತ್ಯೇಕವಾಗಿ, ಕೆಲವು ಪ್ರಾಂತಗಳಲ್ಲಿ ಪರಸ್ಪರ ಜೊತೆಗೂಡಿಕೊಂಡಿವೆ. ವೇದ ಜನರ ಆಗಮನಕ್ಕೆ ಮೊದಲೇ ಭಾರತದಲ್ಲಿ ಇದ್ದ ಆಲೋಚನೆಗಳು, ಅವರ ಆಗಮನದ ನಂತರ ಕೂಡ ವೈದಿಕ ಪ್ರಪಂಚಕ್ಕೆ ಹೊರಗಡೆ ಇದ್ದವುಗಳು. ಕಾಲಕ್ರಮದಲ್ಲಿ ವೈದಿಕ ಸಾಹಿತ್ಯದೊಳಕ್ಕೆ, ಆನಂತರ ಕಾಲದ ಸಂಸ್ಕೃತ ಸಾಹಿತ್ಯದೊಳಕ್ಕೆ ಪ್ರವೇಶಿಸಿರುತ್ತವೆ. ಹಾಗೆ ಪ್ರವೇಶಿಸಿದ ಅವುಗಳಲ್ಲಿ ಸಿಂಧೂ ನಾಗರಿಕತೆಗೆ ಸೇರಿದವುಗಳೇ ಅಲ್ಲದೆ ಭಾರತದ ಆದಿವಾಸಿಗಳವೂ, ಮುಂಡಾ ಭಾಷೆಗಳು, ದ್ರಾವಿಡ ಭಾಷೆಗಳವರವೂ ಇವೆ. ಈ ಪ್ರಭಾವ ಋಗ್ವೇದದ ಮೇಲೆ ಕೂಡ ಕಂಡುಬರುತ್ತದೆ. ಹರಪ್ಪಾ ವಾಸಿಗಳಲ್ಲಿ ಕೆಲವರು ದಕ್ಷಿಣ ಭಾಗಕ್ಕೆ ವಲಸೆ ಹೋದರು, ಅಲ್ಲಿ ಹಿಂದೂ ಮತದ ಮೇಲೆ ಕೂಡ ಆ ನಾಗರಿಕತೆ ಪ್ರಭಾವ ಉಂಟುಮಾಡಿರುತ್ತದೆ. ಏಕಲವ್ಯ ಅವನ ಪ್ರಜೆಗಳಿಗೆ ಯುವರಾಜ. ಆದರೆ ಪಾಂಡವ ರಾಜಕುಮಾರರು ಅದನ್ನು ಲೆಕ್ಕಕ್ಕಿಡುವುದಿಲ್ಲ. ನಿಷಾದರು ಹಿಂದೂಧರ್ಮಕ್ಕೆ ಒಳಪಟ್ಟು ಆ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ. ಹಾಗಿದ್ದರೂ ಜಾತಿ ವ್ಯವಸ್ಥೆಯಲ್ಲಿ ಅವರದು ಕಡೆಯ ಸ್ಥಾನ. ಅಂತಹ ನಿಷಾದನೊಬ್ಬ ಪಾಂಡವರೊಂದಿಗೆ ಸೇರಿ ಬಿಲ್ವಿದ್ಯೆ ಕಲಿಯುವುದೆನ್ನುವುದು ಊಹಾತೀತ. ‘‘ಧರ್ಮ ತಿಳಿದ’’ ದ್ರೋಣನಿಗೆ ಈ ವಿಷಯ ಅರ್ಥವಾಯಿತು. ತನ್ನ ಧರ್ಮವನ್ನು ಹಾಗೂ ತನ್ನ ಶಿಷ್ಯನನ್ನು ಕಾಪಾಡಿಕೊಳ್ಳುವುದಕ್ಕೆ ಅವನು ಏಕಲವ್ಯನ ಬಳಿ ‘ಗುರುದಕ್ಷಿಣೆ’ ಕೇಳುತ್ತಾನೆ. ಮಹಾಭಾರತ ರಚನಾಕಾರ ಈ ಕಥೆಯನ್ನು ಹೇಳಿದ ವಿಧಾನದೊಳಗಿನ ಒಂದು ವಿಶೇಷವನ್ನು ನಾವು ಗುರುತಿಸಬೇಕು. ಏಕಲವ್ಯನ ಹೊರರೂಪ ಯಾವ ವಿಧವಾಗಿದ್ದರೂ ಅವನ ಅಂತರ್ಗತ ಉತ್ತಮ ಲಕ್ಷಣಗಳನ್ನು ಭಾರತದೊಳಗೆ ಉಲ್ಲೇಖಿಸಿದ್ದಾರೆ. ಅದ

Similar News