ಬಿಬಿಎಂಪಿಯಲ್ಲಿ ಕನ್ನಡ ಕಡ್ಡಾಯಗೊಳಿಸಲು ಒತ್ತಾಯ

Update: 2018-07-16 14:02 GMT

ಬೆಂಗಳೂರು, ಜು.16: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಂಗಡಿ ಮುಂಗಟ್ಟುಗಳು, ಮಳಿಗೆಗಳು, ಮಾಲ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಬೇಕೆಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಸೋಮವಾರ ನಗರದ ಅತ್ತಿಗುಪ್ಪೆಯಿಂದ ಬಿಬಿಎಂಪಿ ಕಚೇರಿವರೆಗೂ ಬೈಕ್ ಮೂಲಕ ಮೆರವಣಿಗೆ ನಡೆಸಿದ ಸಂಘಟನೆಯ ಸದಸ್ಯರು, ಬಿಬಿಎಂಪಿಯಲ್ಲಿ ಹೆಚ್ಚಾಗಿ ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಸರಕಾರ ಬಹಳ ವರ್ಷಗಳ ಹಿಂದೆಯೇ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಹೇಳಿದೆ. ಆದರೆ, ಸರಕಾರದ ಆದೇಶವನ್ನು ಪಾಲಿಕೆ ಅನುಸರಿಸುತ್ತಿಲ್ಲ, ಪಾಲಿಕೆ ಮಾಡುವ ಆದೇಶವನ್ನು ಮಳಿಗೆಗಳೂ ಪಾಲಿಸುತ್ತಿಲ್ಲ ಎಂದು ದೂರಿದರು. ಮಳಿಗೆಗಳ ನಾಮಫಲಕದಲ್ಲಿ ಅನ್ಯ ಭಾಷೆಯ ಅಬ್ಬರ ಜೋರಾಗಿದೆ. ಬಿಬಿಎಂಪಿ 15 ದಿನದೊಳಗಾಗಿ ಕನ್ನಡೀಕರಣದ ಕೆಲಸ ಶುರು ಮಾಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News