ಸಂಜಯ್‌ ದತ್: ಒಂದು ಮುಖ ಹಲವು ಬಣ್ಣ

Update: 2018-07-17 05:56 GMT

 ಭಾಗ -2

ದತ್‌ರಿಗೆ ಸಲೇಂನ ಗ್ಯಾಂಗ್‌ಸ್ಟರ್ ಸಂಬಂಧಗಳ ಬಗ್ಗೆ ಸುಳಿವೇ ಇರಲಿಲ್ಲ ಎಂದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ ಅಥವಾ ಮುಂಬೈಯ ಗನ್ ವ್ಯಾಪಾರದಲ್ಲಿ ಭೂಗತ ಜಗತ್ತಿನ ಪಾತ್ರದ ಬಗ್ಗೆ ಅವರಿಗೆ ತಿಳಿದೇ ಇರಲಿಲ್ಲ ಎಂದರೆ ನಂಬುವುದು ಕಷ್ಟ. 1993ರ ಮಾರ್ಚ್ ಸ್ಫೋಟಗಳನ್ನು ನಡೆಸುವ ಒಳಸಂಚಿನ ಬಗ್ಗೆ ಅವರಿಗೆ ಕಲ್ಪನೆ ಕೂಡ ಇದ್ದಿರಲಾರದು. ಆದರೆ ಆ ಸ್ಫೋಟಗಳು ಒಳಸಂಚುಗಾರರ ಜೊತೆಗೆ ಅವರಿಗೆ ಬಿಗಿಯಾದ ಒಂದು ಸಾಮಾಜಿಕ ಆಲಿಂಗನವಿತ್ತು.

3. ದೊಂಬಿಗಳ ಎರಡನೆಯ ಹಂತದಲ್ಲಿ ಆಳವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಮುಂಬೈ ಭೂಗತ ಜಗತ್ತು ಕೂಡ ಈ ಗಂಡಾಂತರದ ಅವಧಿಯಲ್ಲಿ ಮೂಲಭೂತವಾಗಿ ಬದಲಾಯಿತು.

1992 ಡಿಸೆಂಬರ್‌ವರೆಗೆ ಮುಂಬೈಯ ಭೂಗತ ಜಗತ್ತು ಬಹುಮಟ್ಟಿಗೆ ಸೆಕ್ಯುಲರ್(ಜಾತ್ಯತೀತ/ಧರ್ಮನಿರಪೇಕ್ಷ)ವಾಗಿತ್ತು. ಉದಾಹರಣೆಗೆ, ದಾವೂದ್ ಗ್ಯಾಂಗ್‌ನಲ್ಲಿ, ಅಲ್ಲಿಯ ತನಕ ಇತರರಲ್ಲದೆ, ಶರದ್ ಶೆಟ್ಟಿ, ಚೋಟಾ ರಾಜನ್ ಕೂಡ ಇದ್ದರು. ಇವರೆಲ್ಲ ಮುಂಬೈ ನಗರದ ರಿಯಲ್ ಎಸ್ಟೇಟ್ ಸಂಪತ್ತನ್ನು ತಮ್ಮ ತಮ್ಮ ನಡುವೆ ಹಂಚಿಕೊಂಡಿದ್ದರು. ಆ ಸಂಪತ್ತಿನ ಲಾಭ ಪಡೆದಿದ್ದರು. (ಇವರೆಲ್ಲ ಹಿಂದೂಗಳು). ಆದರೆ, 1993ರ ಜನವರಿ ವೇಳೆಗೆ ಅದೇ ದಾವೂದ್ ಗ್ಯಾಂಗ್ ಹಿಂದೂ ಮತ್ತು ಮುಸ್ಲಿಮರ ನಡುವೆ ತೀವ್ರವಾದ ವಿಭಜನೆಯನ್ನು ಕಂಡಿತು.

ದೊಂಬಿಗಳ ಎರಡನೇ ಹಂತದಲ್ಲಿ ಮತ್ತು ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, 1993ರ ಬಾಂಬ್ ಸ್ಫೋಟಗಳು ಸಂಭವಿಸುವ ವೇಳೆಗೆ, ದಾವೂದ್‌ನ ಪ್ರಮುಖ ಗ್ಯಾಂಗ್ ಲೀಡರ್‌ಗಳೆಲ್ಲ ಮುಸ್ಲಿಮರೇ ಆಗಿದ್ದರು. ಟೈಗರ್ ಮೆಮೊನ್, ಚೋಟಾ ಶಕೀಲ್ ಮತ್ತು ಅಬುಸಲೇಂ ಸ್ಫೋಟಗಳ ಸಂಚಿನಲ್ಲಿ ಪ್ರಮುಖ ಪಾತ್ರಧಾರಿಗಳು, ಭಾಗಾಳುಗಳು ಆಗಿದ್ದರು; ಸಹ ಅಪರಾಧಿಗಳಾಗಿದ್ದರೂ 1992-93ರ ಮುಂಬೈ ದೊಂಬಿಗಳು ಪ್ರಾಯಶಃ ಶಾಶ್ವತವಾಗಿ ಮುಂಬೈ ಭೂಗತ ಜಗತ್ತನ್ನು ಕೋಮುವಾದಿಯಾಗಿ ಮಾಡಿದವು, ಕಮ್ಯೂನಲೈಸ್ ಮಾಡಿದವು.

4. 1992ರ ಡಿಸೆಂಬರ್‌ಗೆ ಮೊದಲು, ದಾವೂದ್ ಎಲ್ಲರೂ ಬಹಳ ಹೆದರುತ್ತಿದ್ದ ಒಬ್ಬ ಗ್ಯಾಂಗ್‌ಸ್ಟರ್ ಹಾಗೂ ಚಿನ್ನ ಕಳ್ಳಸಾಗಣೆದಾರನಾಗಿದ್ದ; ಆದರೆ, ಅವ ಒಬ್ಬ ಭಯೋತ್ಪಾದಕನಾಗಿದ್ದ ಅಥವಾ ನಿಜವಾಗಿ ಒಬ್ಬ ಐಎಸ್‌ಐ ಏಜೆಂಟ್ ಆಗಿದ್ದ ಎಂದು ತೋರಿಸುವ, ಸಾಬೀತುಪಡಿಸುವ ಯಾವ ದಾಖಲೆಯೂ ಇಲ್ಲ. ಆ ಸಮಯದಲ್ಲಿ ದಾವೂದ್ ಮುಂಬೈ ಮತ್ತು ಭಾರತಕ್ಕೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದ ಎಂದು ಹೇಳಲು ನನ್ನ ಬಳಿ ಘಟನಾತ್ಮಕ ದಾಖಲೆ ಇದೆ. ಸಾಂದರ್ಭಿಕ ಪುರಾವೆ ಇದೆ. 1991ರ ಅಕ್ಟೋಬರ್‌ನಲ್ಲಿ, ಶಾರ್ಜಾದಲ್ಲಿ ಪಾಕಿಸ್ತಾನವು ಅಂತಿಮ ಸುತ್ತಿನಲ್ಲಿ ಭಾರತವನ್ನು ಸೋಲಿಸಿದ್ದ ಕ್ರಿಕೆಟ್ ಪಂದ್ಯದ ವರದಿ ಮಾಡಲು ನನ್ನನ್ನು ಶಾರ್ಜಾಗೆ ಕಳುಹಿಸಲಾಯಿತು. ಅಲ್ಲಿ ದಾವೂದ್ ಒಂದು ವಿಐಪಿ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಮತ್ತು ಅಂದಿನ ಭಾರತೀಯ ಕ್ರಿಕೆಟಿಗರು ಹೇಳುವ ಹಾಗೆ, ಆತ ಭಾರತ ತಂಡ ಗೆಲ್ಲಬೇಕೆಂದು ಬಯಸಿದ್ದ. (ಪಾಕಿಸ್ತಾನವನ್ನು ಸೋಲಿಸಿದರೆ ಭಾರತ ತಂಡದ ಎಲ್ಲ ಸದಸ್ಯರಿಗೆ ಒಂದೊಂದು ಟೊಯೊಟಾ ಕಾರ್ ನೀಡುವುದಾಗಿ ದಾವೂದ್ ಹೇಳಿದ್ದ ಎಂಬ ಗುಸುಗುಸು ಮಾತು ಆಗ ಕೇಳಿಬಂದಿತ್ತು). ನಿಜವಾಗಿ ಅವನ ಬಾಕ್ಸ್‌ನಲ್ಲಿ ಭಾರತದ ತ್ರಿವರ್ಣಧ್ವಜ ಇದ್ದುದನ್ನು ಹಲವರು ಗಮನಿಸಿದ್ದರು.

1992-93ರ ಕೋಮು ದೊಂಬಿಗಳು ಇವೆಲ್ಲವನ್ನೂ ಬದಲಿಸಿಬಿಟ್ಟವು. ತ್ರಿವರ್ಣ ಧ್ವಜವೊಂದನ್ನು ಹಿಡಿದು ಕೈಬೀಸುವವನಾಗಿದ್ದ ದಾವೂದ್ ಆರ್‌ಡಿಎಕ್ಸ್ ಹಿಡಿದುಕೊಂಡು ತನ್ನ ಬಾಲ್ಯದ ನಗರವನ್ನು ಗುರಿಯಾಗಿಸಿದ ಪಾಕಿಸ್ತಾನ ಪ್ರಾಯೋಜಿತ ಒಬ್ಬ ಭಯೋತ್ಪಾದಕನಾಗಿ ಬಿಟ್ಟ.

5. 1990ರ ದಶಕದ ಅಡಿಯಲ್ಲಿ ದಾವೂದ್ ನೇತೃತ್ವದ ಭೂಗತ ಜಗತ್ತು ಭಾರತದ ಕ್ರಿಕೆಟ್ ಆಟಗಾರರನ್ನು ಮಾತ್ರ ತನ್ನೆಡೆಗೆ ಆಕರ್ಷಿಸಿದ್ದಲ್ಲ; ಮುಂಬೈಯ ಸಿನೆಮಾ ಉದ್ಯಮದ ಮಂದಿ ಕೂಡ ದಾವೂದ್‌ನ ದುಬೈ ಪಾರ್ಟಿಗಳಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲ, ಆ ಪಾರ್ಟಿಗಳಲ್ಲಿ ನೃತ್ಯ ಮಾಡಲು ಕೂಡ ಅವರು ಒಪ್ಪುತ್ತಿದ್ದರು. ಆ ದಿನಗಳಲ್ಲಿ ದಾವೂದ್ ಗ್ಯಾಂಗ್ ಜೊತೆ ನಮ್ಮ ಹಲವು ಟಾಪ್ ಬಾಲಿವುಡ್ ಸ್ಟಾರ್‌ಗಳಿರುವ ಹಲವು ಫೋಟೊಗಳು ಲಭ್ಯವಿವೆ. ಸಮೀರ್ ಹಿಂಗೋರಾ ಮತ್ತು ಮ್ಯಾಗ್ನಮ್ ವೀಡಿಯೊಸ್‌ನ ಹನೀಫ್ ಕಡವಾಲಾರಂತಹ ಭಾರೀ ಸಿನೆಮಾ ನಿರ್ಮಾಪಕರನ್ನು ಯಾವ ಸಿನೆಮಾದಲ್ಲಿ ಯಾವ ನಟನಟಿಯರು ನಟಿಸಬೇಕೆಂದು ತೀರ್ಮಾನಿಸಲು ದುಬೈಗೆ ಕರೆಸಲಾಗುತಿತ್ತು.

ಹಿಂಗೋರಾ ಆಗ ಇಂಡಿಯನ್ ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್‌ನ ಖಜಾಂಚಿ ಆಗಿದ್ದರು. ತಮ್ಮ ಸಿನೆಮಾ ‘ಸನಂ’ ಗಾಗಿ ಹಿಂಗೋರಾ ಮತ್ತು ಕಡವಾಲ ಸಂಜಯ್ದತ್ ಅವರಿಂದ ಸಹಿ ಹಾಕಿಸಿಕೊಂಡಿದ್ದರು. ದೊಂಬಿಗಳು ಸ್ಫೋಟಗೊಂಡಾಗ ಆ ಸಿನೆಮಾದ ಚಿತ್ರೀಕರಣ ನಡೆಯುವುದಿತ್ತು. ಅಂದಿಗೆ ಒಂದು ವರ್ಷ ಮೊದಲು ‘ಎಲ್ಗರ್’ ಎಂಬ ಸಿನೆಮಾ ನಿರ್ಮಾಣದ ಅವಧಿಯಲ್ಲಿ ಫಿರೋಝ್ ಖಾನ್ ದುಬೈಯಲ್ಲಿ ಮೊತ್ತ ಮೊದಲ ಬಾರಿಗೆ ಸಂಜಯ್ ದತ್‌ರನ್ನು ದಾವೂದ್‌ಗೆ ಭೇಟಿ ಮಾಡಿಸಿ ಪರಿಚಯಿಸಿದ್ದರು ಮತ್ತು ಸಂಜಯ್ ದತ್ ಆಗ ಒಂದು ಖಾಸಗಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಂದಿನ ಹಲವು ಚಿತ್ರನಟರ ಹಾಗೆ ಕ್ರಮೇಣ ನಿಧಾನವಾಗಿ ಸಂಜಯ್ ದತ್ ದಾವೂದ್‌ನ ಸಿನೆಮಾ ವೃತ್ತದೊಳಗೆ ಸೇರಿಸಲ್ಪಟ್ಟರು. ದತ್‌ಗೆ ಆ ಡಾನ್ ನೊಂದಿಗಿನ ಸಂಬಂಧ ಒಂದು ಆರ್ಥಿಕ, ಅವಶ್ಯಕತೆಯೂ ಆಗಿತ್ತು. ಜೊತೆಗೆ ಒಂದು ಸಾಮಾಜಿಕ ಹಂಗೂ ಕೂಡ ಆಗಿತ್ತು.

6. ಸಂಜಯ್ದತ್‌ರ ಭೂಗತ ಜಗತ್ತಿನ ಭಯೋತ್ಪಾದಕ ಸಂಬಂಧದ ಆರಂಭ 1993ರ ದೊಂಬಿಗಳ ನಂತರ ಆಯಿತು. ಸಂಜಯ್ದತ್ ಭೂಗತ ಜಗತ್ತಿನ ಮಂದಿಯೊಂದಿಗೆ ಫೋನಿನ ಮೂಲಕ ಸಂಪರ್ಕಿಸಿಕೊಂಡು ಅವರೊಂದಿಗೆ ವೈಯಕ್ತಿಕವಾದ ಒಂದು ಕೊಂಡಿಯನ್ನು ಸ್ಥಾಪಿಸಿದ ಬಳಿಕ, ತನ್ನ ಕುಟುಂಬವನ್ನು ‘ರಕ್ಷಿಸಲು’ ಮತ್ತು ‘ಆತ್ಮರಕ್ಷಣೆ’ಗಾಗಿ ಅವರ ನೆರವು ಯಾಚಿಸಿದ್ದು ಜನವರಿ ತಿಂಗಳ ಮಧ್ಯ ಭಾಗದಲ್ಲಿ. ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ದತ್, ತನ್ನ ಸಿನೆಮಾ ನಿರ್ಮಾಪಕರಾದ ಹಿಂಗೋರಾ ಮತ್ತು ಕಡವಾಲ ತನಗೆ ಎಕೆ 56 ಗನ್ ನೀಡಿದರು; ಅದನ್ನು ಸಲೇಂ ಎಂದು ಕರೆಯಲಾದ ಒಬ್ಬ ಮನುಷ್ಯ ತನಗೆ ಬಟವಾಡೆ ಮಾಡಿದ್ದ ಎಂದಿದ್ದಾರೆ. ಗನ್ ಬೇಕೆಂದು ದತ್ ಹೇಳಿದರೋ ಅಥವಾ ಸಿನೆಮಾ ನಿರ್ಮಾಪಕರು ಅದನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ದತ್‌ರನ್ನು ಒತ್ತಾಯಿಸಿದ್ದಾರೋ ಎಂಬುದೇನೂ ಇರಲಿ; ದತ್‌ರಿಗೆ ಸಲೇಂನ ಗ್ಯಾಂಗ್‌ಸ್ಟರ್ ಸಂಬಂಧಗಳ ಬಗ್ಗೆ ಸುಳಿವೇ ಇರಲಿಲ್ಲ ಎಂದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ ಅಥವಾ ಮುಂಬೈಯ ಗನ್ ವ್ಯಾಪಾರದಲ್ಲಿ ಭೂಗತ ಜಗತ್ತಿನ ಪಾತ್ರದ ಬಗ್ಗೆ ಅವರಿಗೆ ತಿಳಿದೇ ಇರಲಿಲ್ಲ ಎಂದರೆ ನಂಬುವುದು ಕಷ್ಟ. 1993ರ ಮಾರ್ಚ್ ಸ್ಫೋಟಗಳನ್ನು ನಡೆಸುವ ಒಳಸಂಚಿನ ಬಗ್ಗೆ ಅವರಿಗೆ ಕಲ್ಪನೆ ಕೂಡ ಇದ್ದಿರಲಾರದು. ಆದರೆ ಆ ಸ್ಫೋಟಗಳು ಒಳಸಂಚುಗಾರರ ಜೊತೆಗೆ ಅವರಿಗೆ ಬಿಗಿಯಾದ ಒಂದು ಸಾಮಾಜಿಕ ಆಲಿಂಗನವಿತ್ತು.

ದತ್ ಓರ್ವ ಮೂರ್ಖ ಮನುಷ್ಯ-ಶಿಶು (ಮ್ಯಾನ್ ಚೈಲ್ಡ್) ಆಗಿದ್ದಿರಬಹುದು. ಆದರೆ ತನ್ನ ಸುತ್ತ ಇರುವ ಜನರ ಪೂರ್ವಾಪರಗಳನ್ನು ತಿಳಿಯದಿದ್ದಷ್ಟು ಮುಗ್ಧ ವ್ಯಕ್ತಿ ಅವರಾಗಿರಲಿಲ್ಲ. ಸತ್ಯ ಸಂಗತಿಯೆಂದರೆ, ಆಗ ಮುಂಬೈಯ ಭೂಗತ ಜಗತ್ತು (ನಮ್ಮ ಇಂದಿನ ಬ್ಯಾಂಕ್‌ಗಳಿಗೆ ಮೋಸ ಮಾಡಿ ಸಾವಿರಾರು ಕೋಟಿ ಸಾಲ ತೀರಿಸದೆ ವಿದೇಶಕ್ಕೆ ಪಲಾಯನ ಮಾಡುವ ಮೋಸಗಾರರ ಹಾಗೆ ಮತ್ತು ಒಂದು ತಲೆಮಾರಿನ ನಂತರ ಸಿರಿವಂತ ಉದ್ಯಮಿಗಳ ಹಾಗೆ), ತನ್ನ ಸುತ್ತ ಬಲಾಡ್ಯರ ಹಾಗೂ ಹೈ ಸೊಸೈಟಿಯ ಗೌರವಾನ್ವಿತ ಉಡುಗೆ ತೊಟ್ಟಿತ್ತು. ಸಂಭಾವಿತರ ಮುಖವಾಡ ಧರಿಸಿತ್ತು. ಸಂಜಯ್ದತ್ ಮತ್ತು ಅವರ ಗೆಳೆಯರು ಗ್ಯಾಂಗ್‌ಸ್ಟರ್ ಉಪಸಂಸ್ಕೃತಿಯೊಂದಿಗೆ ಸಂತೋಷದಿಂದ ಚೆಲ್ಲಾಟವಾಡುತ್ತಿದ್ದು ಆ ದಿನಗಳ ಹಲವು ಮಂದಿ ಹೈ ಪ್ರೊಫೈಲ್ ಮುಂಬೈ ವಾಸಿಗಳ ಹಾಗೆ ಆ ಉಪ ಸಂಸ್ಕೃತಿಯೊಂದಿಗೆ ಖುಷಿಯಾಗಿ ಓಡಾಡಿಕೊಂಡಿದ್ದರು.

ಕೃಪೆ: scroll.in      

Writer - ರಾಜದೀಪ್ ಸರ್ದೇಸಾಯಿ

contributor

Editor - ರಾಜದೀಪ್ ಸರ್ದೇಸಾಯಿ

contributor

Similar News