ಕ್ರಿಸ್ ಗೇಲ್ ಒಂದೇ ಕೈಯಲ್ಲಿ ಪಡೆದ ಕ್ಯಾಚ್‌ಗೆ ಅಭಿಮಾನಿಗಳು ವಿಸ್ಮಯ

Update: 2018-07-17 08:23 GMT

ಟೊರೊಂಟೊ, ಜು.17: ವೆಸ್ಟ್‌ಇಂಡೀಸ್‌ನ ದೈತ್ಯ ದಾಂಡಿಗ ಕ್ರಿಸ್ ಗೇಲ್ ಕೆನಡಾದಲ್ಲಿ ನಡೆದ ಗ್ಲೋಬಲ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯದ ವೇಳೆ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಅಭಿಮಾನಿಗಳನ್ನು ವಿಸ್ಮಯಗೊಳಿಸಿದರು.

ತಾನೇ ನಿಜವಾದ ‘ಯುನಿವರ್ಸ್ ಬಾಸ್’ ಎಂದು ಕರೆದುಕೊಳ್ಳುತ್ತಿರುವ ಗೇಲ್ ಟ್ವೆಂಟಿ-20 ಟೂರ್ನಿಯಲ್ಲಿ ವ್ಯಾಂಕೋವೆರ್ ನೈಟ್ಸ್ ತಂಡದ ಪರ ಆಡಿದ್ದರು. ವೆಸ್ಟ್‌ಇಂಡೀಸ್ 'ಬಿ' ತಂಡದ ವಿರುದ್ಧ ಮೊದಲ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಿರತರಾಗಿದ್ದ ಗೇಲ್ ಕೇವೆಂ ಹಾಡ್ಜ್ ನೀಡಿದ ಕ್ಯಾಚ್‌ನ್ನು ಅದ್ಭುತವಾಗಿ ಪಡೆಯುವ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು.

ಹಾಡ್ಜ್ ಆಫ್ ಸ್ಪಿನ್ನರ್ ಫವಾದ್ ಅಹ್ಮದ್ ಬೌಲಿಂಗ್‌ನಲ್ಲಿ ಚೆಂಡನ್ನು ಕೆಣಕಲು ಹೋಗಿ ಗೇಲ್‌ಗೆ ಕ್ಯಾಚ್ ನೀಡಿದ್ದಾರೆ. ಗೇಲ್ ಚೆಂಡನ್ನು ಪಡೆಯಲು ತನ್ನ ಎಡಭಾಗಕ್ಕೆ ಹಾರಿದರು. ಆದರೆ, ಚೆಂಡು ಅವರ ಎಡಗೈಯಿಂದ ಮೇಲಕ್ಕೆ ಹಾರಿತು. ಆದಾಗ್ಯೂ ಜಮೈಕಾ ಆಟಗಾರ ಬಲಗೈಯಿಂದ ಚೆಂಡನ್ನು ಪಡೆಯಲು ಯಶಸ್ವಿಯಾಗಿದ್ದಾರೆ.

ನೈಟ್ಸ್ ತಂಡ ವೆಸ್ಟ್‌ಇಂಡೀಸ್ 'ಬಿ' ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಗೇಲ್ ಈ ವರ್ಷದ ಐಪಿಎಲ್‌ನಲ್ಲಿ ಪಂಜಾಬ್ ತಂಡದ ಪರ ಆಡಿದ್ದರು. 11 ಪಂದ್ಯಗಳಲ್ಲಿ 1 ಶತಕ, 3 ಅರ್ಧಶತಕಗಳ ಸಹಿತ 368 ರನ್ ಗಳಿಸಿ ಪಂಜಾಬ್ ತಂಡದಲ್ಲಿ ಕೆಎಲ್ ರಾಹುಲ್ ಬಳಿಕ ಎರಡನೇ ಗರಿಷ್ಠ ಸ್ಕೋರ್ ಗಳಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News