ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜು.17: ಮುಖ್ಯಮಂತಿ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಭಾರಿ ಅಥವಾ ಲಘು ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿಯನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಈ ವೆಬ್‌ಸೈಟ್ WWW.kaushalkar.com ನಲ್ಲಿ ನೋಂದಣಿ ಮಾಡಿಕೊಂಡು ಮೂಲ ದಾಖಲೆಗಳು ಹಾಗೂ ಜೆರಾಕ್ಸ್ ಪ್ರತಿಗಳ ಸಹಿತ ಕೂಡಲೇ ಕೇಂದ್ರೀಯ ತರಬೇತಿ ಕೇಂದ್ರಕ್ಕೆ ಸಲ್ಲಿಸಬೇಕು.
ಭಾರಿ ಅಥವಾ ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವವರು ಸಲ್ಲಿಸಬೇಕಾದ ದಾಖಲೆಗಳು: ಎಸೆಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣ ಅಂಕಪಟ್ಟಿ, ಲಘು ವಾಹನ ಚಾಲನಾ ಪರವಾನಿಗೆಯನ್ನು ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 21 ವರ್ಷ, ಗರಿಷ್ಠ 35 ವರ್ಷ ಮೀರಿರಬಾರದು. ನಾಲ್ಕು ಪಾಸ್‌ಪೋರ್ಟ್ ಅಳತೆಯ ಫೋಟೋಗಳು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್. ಡಿಎಲ್ ಎಕ್ಸ್‌ಟ್ರ್ಯಾಕ್ಟ್ ಹಾಗೂ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಬಿ.ಸಂ.ಹೊಂದಿರುವವರು) ಸಂಬಂಧಿಸಿದ ಸಾರಿಗೆ ಕಚೇರಿಯಿಂದ ಪಡೆದು ಸಲ್ಲಿಸಬೇಕು.
ತಾಂತ್ರಿಕ ತರಬೇತಿಗೆ ಟೈರ್ ಫಿಟ್ಟರ್, ಆಟೋ ಮೆಕ್ಯಾನಿಕ್ ಹಾಗೂ ವೆಲ್ಡರ್ ತರಬೇತಿಗೆ ಎಸೆಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣ ಹೊಂದಿರುವ ಬಗ್ಗೆ ಅಂಕಪಟ್ಟಿ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ನಾಲ್ಕು ಪಾಸ್‌ಪೋರ್ಟ್ ಅಳತೆಯ ಫೋಟೋಗಳು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ.080-22221652, ಮೊ.ನಂ. 77609 92539, 90666 27459 ಹಾಗೂ ಮಾಲೂರು ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಲಿಚ್ಛಿಸುವವರು 77609 93889, 99022 56451 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.